ಮನೆ ರಾಜ್ಯ ಶಾಲಾ ಬಸ್ಸನ್ನು ಅಟ್ಟಿಸಿಕೊಂಡು ಬಂದ ಒಂಟಿ ಸಲಗ..!

ಶಾಲಾ ಬಸ್ಸನ್ನು ಅಟ್ಟಿಸಿಕೊಂಡು ಬಂದ ಒಂಟಿ ಸಲಗ..!

0

ಮಡಿಕೇರಿ : ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ, ಶಾಲಾ ಬಸ್ಸನ್ನು ಕಾಡಾನೆಯೊಂದು ಅಟ್ಟಿಸಿಕೊಂಡು ಬಂದ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಯಿಂದ ಬಸ್ಸಿನಲ್ಲಿದ್ದ, ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದರು.

ಬಾಡಗ–ಬಾಣಂಗಾಲ ಹಾಗೂ ಮಠ ಭಾಗದ ವಿದ್ಯಾರ್ಥಿಗಳನ್ನು ಶಾಲಾ ಬಸ್ಸಿನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಾಣಂಗಾಲ–ಮಠ ನಡುವಿನ ಕಾಫಿ ತೋಟದಿಂದ ಏಕಾಏಕಿ ರಸ್ತೆಗಿಳಿದ ಕಾಡಾನೆ, ಶಾಲಾ ವಾಹನವನ್ನು ಕಂಡು ಅಟ್ಟಿಸಿಕೊಂಡು ಬಂದಿದೆ. ಈ ಘಟನೆಯ ವೇಳೆ ಬಸ್ಸಿನಲ್ಲಿದ್ದ, ವಿದ್ಯಾರ್ಥಿಗಳು ಭಯದಿಂದ ಚೀರಾಡಿದ್ದು, ಅತಂಕದ ವಾತಾವರಣ ನಿರ್ಮಾಣವಾಗಿತ್ತು.

ಶಾಲಾ ಬಸ್ ಚಾಲಕ ಸುನಿಲ್ ಅವರ ಪುತ್ರಿ, ಕಾಡಾನೆ ಬಸ್ಸನ್ನು ಅಟ್ಟಿಸಿಕೊಂಡು ಬಂದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಸುಮಾರು 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ವಾಹನಕ್ಕಾಗಿ ಕಾದು ಕುಳಿತ್ತಿದ್ದರು.

ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ಶಾಲಾಮಕ್ಕಳ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.