ಛತ್ತೀಸ್’ಗಢ: ಮದುವೆಯ ಖುಷಿಯಲ್ಲಿ ನೃತ್ಯ ಮಾಡುತ್ತಲೇ ವ್ಯಕ್ತಿಯೊಬ್ಬರು ಪ್ರಾಣಬಿಟ್ಟಿರುವ ಘಟನೆ ಛತ್ತೀಸ್’ಗಢದ ರಾಜನಂದಗಾಂವ್ ಜಿಲ್ಲೆಯ ಡೊಂಗರ್’ಗಢದಲ್ಲಿ ನಡೆದಿದೆ.
ಎಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಯಾಗಿದ್ದ ದಿಲೀಪ್ ರೌಜ್ಕರ್ ಛತ್ತೀಸ್’ಗಢದ ಬಲೋದ್ ಜಿಲ್ಲೆಯ ನಿವಾಸಿಯಾಗಿದ್ದರು.
ಮೇ 4 ಮತ್ತು 5 ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ವ್ಯಕ್ತಿ ತನ್ನ ಸೊಸೆಯ ಮದುವೆಯಲ್ಲಿ ನೃತ್ಯ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ, ವ್ಯಕ್ತಿ ಮೊದಲು ವೇದಿಕೆಯೊಂದರಲ್ಲಿ ಇತರ ಕೆಲವರೊಂದಿಗೆ ಉತ್ಸಾಹಭರಿತವಾಗಿ ನೃತ್ಯ ಮಾಡುತ್ತಿದ್ದಾರೆ. ತಕ್ಷಣ ಇದ್ದಕ್ಕಿದ್ದಂತೆ ನೃತ್ಯ ನಿಲ್ಲಿಸಿ ವೇದಿಕೆಯ ಮೇಲೆ ಕುಳಿತು ಕೆಲ ಕ್ಷಣಗಳ ನಂತರ ಕುಸಿದು ಬಿದ್ದಿದ್ದಾರೆ. ದಿಲೀಪ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.