ಮನೆ Uncategorized ಜೆಡಿಎಸ್ ಅಧಿಕಾರಕ್ಕೆ ಬಂದಾಗ ಕೃಷ್ಣ, ಮೇಕೆದಾಟು ಯೋಜನೆ ಜಾರಿಗೆ ತರದಿದ್ದರೆ ಜೆಡಿಎಸ್ ವಿಸರ್ಜನೆ: ಹೆಚ್ ಡಿಕೆ

ಜೆಡಿಎಸ್ ಅಧಿಕಾರಕ್ಕೆ ಬಂದಾಗ ಕೃಷ್ಣ, ಮೇಕೆದಾಟು ಯೋಜನೆ ಜಾರಿಗೆ ತರದಿದ್ದರೆ ಜೆಡಿಎಸ್ ವಿಸರ್ಜನೆ: ಹೆಚ್ ಡಿಕೆ

0

ರಾಮನಗರ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ ಐದು ವರ್ಷಗಳಲ್ಲಿ ಕೃಷ್ಣ , ಮೇಕೆದಾಟು ಯೋಜನೆ ಜಾರಿಗೆ ತರದೇ ಹೋದರೆ ಜೆಡಿಎಸ್ ವಿಸರ್ಜಿಸುತ್ತೇನೆ ಎಂದು ಪಕ್ಷದ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಶನಿವಾರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕನಿಷ್ಠ 4-5 ಲಕ್ಷ ಕೋಟಿ ರೂಪಾಯಿ ಬೇಕಿದೆ ಎಂದರು.

ಇನ್ನೂ ನೂರು ವರ್ಷ ಕಾಂಗ್ರೆಸ್ – ಬಿಜೆಪಿ ದೇಶ ಆಳಿದರೂ ಮೇಕೆದಾಟು ಯೋಜನೆಗೆ ಚಾಲನೆ ನೀಡುವುದಿಲ್ಲ. ಈಗಾಗಲೇ ಯೋಜನೆ ವೆಚ್ಚ 12 ಸಾವಿರ ಕೋಟಿ ವೆಚ್ಚಕ್ಕೆ ಏರಿಕೆ ಆಗಿದೆ. ಯೋಜನೆಗೆ ಚಾಲನೆ ನೀಡುವ ವೇಳೆಗೆ ವೆಚ್ಚ 20 ಸಾವಿರ ಕೋಟಿ ರೂಪಾಯಿಗೆ ಏರಿಕೆ ಆಗಬಹುದು ಎಂದರು.

ಇದೇ 12ರ‌ಂದು ರಾಮನಗರದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಜಲಧಾರೆ ವಾಹನಗಳಿಗೆ ಚಾಲನೆ ನೀಡಲಾಗುವುದು. ಇದೇ 16 ರಿಂದ ರಾಜ್ಯದಾದ್ಯಂತ ಜಲಧಾರೆ ಯಾತ್ರೆ ಆರಂಭಗೊಳ್ಳಲಿದೆ ಎಂದರು.

ಹಿಂದಿನ ಲೇಖನರಾಯಲ್ ಚಾಲೆಂಜರ್ಸ್ ಗೆ ಮುಂಬೈ ಇಂಡಿಯನ್ಸ್ ಸವಾಲು
ಮುಂದಿನ ಲೇಖನತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಸಮಯದ ಕೊರತೆ ನಿವಾರಣೆ: ನ್ಯಾ‌.ಎಂ.ಎಲ್.ರಘುನಾಥ್