ಕುಣಿಗಲ್: ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳ್ಳನಂಜನಪಾಳ್ಯ ಗ್ರಾಮದಲ್ಲಿ ಫೆ. 10ರ ಶನಿವಾರ ನಸುಕಿನಲ್ಲಿ ನಡೆದಿದೆ.
ಕುಳ್ಳ ನಂಜನಪಾಳ್ಯ ಗ್ರಾಮದ ಮರಿಯಪ್ಪ(50) ಕೊಲೆಯಾದ ವ್ಯಕ್ತಿ.
ಕಳೆದ ಶುಕ್ರವಾರ ಸಂಜೆ 6 ಗಂಟಗೆ ಮರಿಯಪ್ಪ ತನ್ನ ಮನೆಯವರಿಗೆ ಹೊರಗೆ ಹೊಗಿ ಬರುತ್ತೇನೆ ಎಂದು ಹೇಳಿ ಹೋಗಿ ವಾಪಸ್ ಮನೆಗೆ ಬರದಿರುವುದರಿಂದ ಅನುಮಾನಗೊಂಡ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗುವಷ್ಟರಲ್ಲಿ ಮರಿಯಪ್ಪ ಅವರು ಹೇರೂರು, ಕುಳ್ಳನಂಜನಪಾಳ್ಯ ಗ್ರಾಮದ ಮಧ್ಯೆ ಕೊಲೆಯಾಗಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಕುಣಿಗಲ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೊಲೆಯ ಕುರಿತು ನಿಖರ ಮಾಹಿತಿ ತಿಳಿದು ಬಂದಿಲ್ಲ.














