ಮನೆ ಸುದ್ದಿ ಜಾಲ ಉಡುಪಿ: ನಮಾಜ್‌ ಮಾಡುತ್ತಾ ಕುಳಿತಲ್ಲೇ ಕುಸಿದು ವ್ಯಕ್ತಿ ಸಾವು

ಉಡುಪಿ: ನಮಾಜ್‌ ಮಾಡುತ್ತಾ ಕುಳಿತಲ್ಲೇ ಕುಸಿದು ವ್ಯಕ್ತಿ ಸಾವು

0

ಉಡುಪಿ: ಮಸೀದಿಯೊಳಗೆ ನಮಾಜ್‌ ಮಾಡುತ್ತಾ ಕುಳಿತಲ್ಲೇ ಕುಸಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಯಲ್ಲಿ ನಡೆದಿದೆ.

ದೊಡ್ಡಣಗುಡ್ಡೆಯ ಕರಂಬಳ್ಳಿ ನಿವಾಸಿ ಮುಸ್ತಾಕ್(55) ಮೃತ ವ್ಯಕ್ತಿ.

ಶುಕ್ರವಾರ ಮಧ್ಯಾಹ್ನದ ನಮಾಜ್​ ಗೆಂದು ಅಬ್ದುಲ್​ ಖಾದರ್​ ಕಳಾರ್​ ಅವರು ಅಂಜುಮಾನ್ ಮಸೀದಿಗೆ ಬಂದಿದ್ದು, ಎಲ್ಲರೂ ತಮ್ಮ ಪಾಡಿಗೆ ನಮಾಜ್​ ಮಾಡುತ್ತಿರುವಾಗ ಮುಸ್ತಾಕ್​ ಕುಳಿತಲ್ಲೇ ಉರುಳಿ ಬಿದ್ದಿದ್ದಾರೆ.

ಮುಷ್ತಾಕ್‌ ಅವರು ಶುಕ್ರವಾರ ಮಧ್ಯಾಹ್ನದ ಜುಮಾ ನಮಾಜ್‌ ಗಾಗಿ ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಗೆ ಬಂದಿದ್ದರು. ಅವರು ಖುತ್ಬಾ ಕೇಳಲು ಕುಳಿತಿದ್ದಾಗ ಒಮ್ಮಿಂದೊಮ್ಮೆಗೇ ಏನೋ ಆದಂತಾಗಿ ಕುಳಿತಿದ್ದಲ್ಲೇ ಕುಸಿದು ಬಿದ್ದರು. ಅವರ ಜತೆಗೆ ನಮಾಜ್‌ ಮಾಡುತ್ತಿದ್ದವರಿಗೆ ಮೊದಲು ಏನಾಗುತ್ತಿದೆ ಎಂದು ಅರ್ಥವಾಗಿಲ್ಲ. ಯಾರೂ ಸಹ ಅಷ್ಟು ಅವರತ್ತ ಗಮನಹರಿಸದೇ ತಮ್ಮ ಪಾಡಿಗೆ ತಾವು ನಮಾಜ್ ಮಾಡುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಕೂಡಲೇ ಅವರನ್ನು ಮೇಲೆ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದ್ರೆ, ಮುಸ್ತಾಕ್​ ಮೇಲೇಳಲೇ ಇಲ್ಲ. ನಂತರ ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ದರು, ಬದುಕಿಸಲು ಸಾಧ್ಯವಾಗಲಿಲ್ಲ.

ಹಿಂದಿನ ಲೇಖನಮಾರಕಾಸ್ತ್ರಗಳಿಂದ ಭೀಕರವಾಗಿ ವ್ಯಕ್ತಿಯ ಹತ್ಯೆ
ಮುಂದಿನ ಲೇಖನನಾಡಬಾಂಬ್​​ ಬಳಸಿ ಕಾಡುಪ್ರಾಣಿಯನ್ನು ಬೇಟೆಯಾಡುತ್ತಿದ್ದವನ ಬಂಧನ