ಮನೆ ಪ್ರಕೃತಿ ಅರ್ಥಪೂರ್ಣವಾಗಿ ನಡೆದ `ಹಸಿರೋತ್ಸವ’ ಕಾರ್ಯಕ್ರಮ

ಅರ್ಥಪೂರ್ಣವಾಗಿ ನಡೆದ `ಹಸಿರೋತ್ಸವ’ ಕಾರ್ಯಕ್ರಮ

0

ಮೈಸೂರು(Mysuru): ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಚಾರ ನಿರ್ಮೂಲನಾ ಸಂಸ್ಥೆ ಮತ್ತು ಸವಾಲ್ ಪತ್ರಿಕೆ ಸಹಯೋಗದಲ್ಲಿ ` ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ’ ಎಂಬ ಪರಿಕಲ್ಪನೆಯೊಂದಿಗೆ ಏರ್ಪಡಿಸಲಾಗಿದ್ದ `ಹಸಿರೋತ್ಸವ’ಕಾರ್ಯಕ್ರಮ ಗುರುವಾರ ಅರ್ಥಪೂರ್ಣವಾಗಿ ನಡೆಯಿತು.

ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರು ಹಾಗೂ ಪೀಪಲ್ಸ್ ಪಾರ್ಕ್ ಶಾಲೆಯ ವಿದ್ಯಾರ್ಥಿಗಳು, ಸುಭಾಷ್ ನಗರದ ಬಿ.ಎಂ.ರಸ್ತೆಯಲ್ಲಿರುವ ದಂಡಿ ಮಾರಮ್ಮ ದೇವಸ್ಥಾನ ಸೇವಾ ರಸ್ತೆಯ ಬದಿಯಲ್ಲಿ ಗಿಡ ನೆಡುವ ಮೂಲಕ ಪ್ರಕೃತಿಯ ಮಹತ್ವ ಸಾರಿದರು.

ಚಂದ್ರವನ ಆಶ್ರಮದ ಶ್ರೀ ಕ್ಷೇತ್ರ ಬೇಬಿ ಮಠದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ  ವಹಿಸಿ, ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಿ:

ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಿದರೆ ಮಾತ್ರ ಸಮಾಜದಲ್ಲಿ ಆರೋಗ್ಯಯುತ ವಾತಾವರಣ ಕಾಣಬಹುದು ಎಂದು ಮಲೆ ಮಹದೇಶ್ವರ ಬೆಟ್ಟದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ತಿಳಿಸಿದರು.

ಮರಗಳನ್ನು ಕಡಿದು ಕಾಂಕ್ರಿಟ್ ವಾತಾವರಣ ನಿರ್ಮಾಣ ಮಾಡುವುದಕ್ಕಿಂತ, ಗಿಡನೆಟ್ಟು ಹಸಿರು ಉಳಿಸಬೇಕಿದೆ. ಉತ್ತಮ ಪರಿಸರವಿದ್ದರೆ ನಾವೆಲ್ಲ ನೆಮ್ಮದಿಯಾಗಿ ಇರಬಹುದು. ಪ್ರಕೃತಿ ಪ್ರತಿಯೊಬ್ಬರಿಗೂ ಉಪಯೋಗಕಾರಿ ಎಂದು ತಿಳಿಸಿದರು.

ಜಾಗತಿಕ ತಾಪಮಾನ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ  ಮರಗಿಡಗಳನ್ನು ನೆಡುವುದು ಅತೀಮುಖ್ಯ. ಮರಗಳನ್ನು ನೆಟ್ಟು ಬೆಳೆಸುವುದರೊಂದಿಗೆ  ಮರಗಳನ್ನು ಕಡಿಯುವುದನ್ನು ತಪ್ಪಿಸಬೇಕಾಗಿದೆ ಎಂದು ತಿಳಿಸಿದರು.

ಮಕ್ಕಳಂತೆ ಗಿಡಗಳನ್ನು ಪೋಷಿಸಿ:

ರಸ್ತೆಯಲ್ಲಿ ಗಿಡ ನೆಟ್ಟು ಬಳಿಕ ಮರೆಯಬಾರದು. ಅವುಗಳ ಪೋಷಣೆ ಮಾಡುವುದು ಕರ್ತವ್ಯವಾಗಬೇಕು. ಬಾಲ್ಯದಿಂದ ಮಕ್ಕಳನ್ನು ಹೇಗೆ ಪೋಷಣೆ ಮಾಡುತ್ತೇವೆಯೋ, ಅದೇ ರೀತಿ ಗಿಡಗಳನ್ನು ಪೋಷಣೆ ಮಾಡಿ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್, ನರಸಿಂಹ ರಾಜ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಅಜರುದ್ದೀನ್, ಪೀಪಲ್ಸ್ ಪಾರ್ಕ್ ಶಾಲೆ ಮುಖ್ಯ ಶಿಕ್ಷಕ ಸೋಮಶೇಖರ್, ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಸಮೀ ಅಜ್ಜು, ಸವಾಲ್ ಪತ್ರಿಕೆ ಸಂಪಾದಕ ಪ್ರದೀಪ್ ಕುಮಾರ್, ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಚಾರ ನಿರ್ಮೂಲನಾ ಸಂಸ್ಥೆ ಹಾಗೂ ಸವಾಲ್ ಪತ್ರಿಕೆಯ ಪದಾಧಿಕಾರಿಗಳು ಮತ್ತು ಪೀಪಲ್ಸ್ ಪಾರ್ಕ್ ಶಾಲೆಯ  ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಗೆ ಹಾಗೂ ಗಣ್ಯರಿಗೆ ಬೆಳಗಿನ ಉಪಹಾರ ವಿತರಿಸಲಾಯಿತು.

ಹಿಂದಿನ ಲೇಖನ`ಅಗ್ನಿಪಥ’ ನೇಮಕಾತಿ ವಿರುದ್ಧ ಪ್ರತಿಭಟನೆ: ಬಿಹಾರದ ಉಪ ಮುಖ್ಯಮಂತ್ರಿ ಮನೆ ಮೇಲೆ ದಾಳಿ
ಮುಂದಿನ ಲೇಖನನಟ ಹೃತಿಕ್ ರೋಷನ್ ಅಜ್ಜಿ ಪದ್ಮಾ ರಾಣಿ ಓಂ ಪ್ರಕಾಶ್ ನಿಧನ