ಮನೆ ಸಾಹಿತ್ಯ ಕೆಲಸವನ್ನು ಮತ್ತೆ ಮತ್ತೆ ಮಾಡಬೇಕೆಂದೆನಿಸುವ ಮಾನಸಿಕ ಸಮಸ್ಯೆ

ಕೆಲಸವನ್ನು ಮತ್ತೆ ಮತ್ತೆ ಮಾಡಬೇಕೆಂದೆನಿಸುವ ಮಾನಸಿಕ ಸಮಸ್ಯೆ

0

     ಒಂದು ಬಾರಿ ಮಾಡಿದ ಕೆಲಸವನ್ನು ಮತ್ತೊಮ್ಮೆ ಮಾಡುವುದು ಒಳ್ಳೆಯದೇ ಆದರೂ,ಅನುಮಾನದಿಂದ ಮತ್ತೆ ಮತ್ತೆ ಅದನ್ನು ಪರೀಕ್ಷಿಸಬೇಕೆಂದೆನಿಸುವುದು, ಮಾಡಬೇಕೆಂದೆನಿಸುವುದು ಅದರ ಬಗೆಯೇ ಯೋಚಿಸುತ್ತಾ ಕೂರುವುದು ಸ್ವಲ್ಪವೂ ಒಳ್ಳೆಯದಲ್ಲ. ಇದನ್ನು ಅಬ್ಸೆಸ್ಸೀವ್ ಕಂಪಲ್ಸಿವ್  ಡಿಸಾರ್ಡರ್ ಎನ್ನುತ್ತಾರೆ.

Join Our Whatsapp Group

      ದೇವರಿಗೆ ಪದೇಪದೇ ನಮಸ್ಕರಿಸುತ್ತಿರುವುದು, ಕೈ ಮುಗಿಯುತ್ತಾ ಇರುವುದು, ಎಷ್ಟು ಬೇಡವೆಂದುಕೊಂಡರೂ ಇಷ್ಟವಿಲ್ಲದ,  ಆನಾರೋಗ್ಯಕರವಾದ, ಭಯಂಕರವಾದ ಆಲೋಚನೆಗಳ ಕುರಿತು ಅತಿಯಾಗಿ ಆಲೋಚಿಸುವುದು ಈ ರೋಗದಲ್ಲಿನ ಪ್ರಮುಖ ಲಕ್ಷಣಗಳು.

 ಮುಖ್ಯವಾಗಿ ಇವು ನಾಲ್ಕು ವಿಷಯಗಳಲ್ಲಿಇರುತ್ತವೆ.

1. ಅತಿ ಶುಭ್ರತೆ

2. ಅತೀ ಜಾಗೃತೆ ಎಚ್ಚರಿಕೆ

3. ಅತೀ ಭಕ್ತಿ

4. ಅತೀ ಭಯ.

      ಈ ನಾಲ್ಕರಲ್ಲಿ ಯಾವುದಾದರೂ ಒಂದು ಅಥವಾ ಎರಡು ಇರುತ್ತದೆ.ಸಹಜವಾಗಿ ಮನೆಯಲ್ಲಿ ಮಡಿ, ಆಚಾರ, ಶುಚಿತ್ವ ಭದ್ರತೆ ಹಾಗೂ ಭಯ-ಭಕ್ತಿಗಳ ಬಗ್ಗೆ ಅತಿಯಾಗಿ ಹೇಳುವುದರಿಂದ ಈ ಅಭ್ಯಾಸ ಬರುವ ಸಾಧ್ಯತೆ ಇದೆ.

     ಮಕ್ಕಳು ಸಣ್ಣ ಪುಟ್ಟ ವಿಷಯಗಳಿಗೆಲ್ಲಾ ಈ ಸಮಸ್ಯೆಯನ್ನು ಬೆಳೆಸಿಕೊಳ್ಳುತ್ತಾರೆ.ಈ ರೀತಿಯಾಗಿ ಮಾಡಿದರೆ ಪರೀಕ್ಷೆಯಲ್ಲಿ ಪಾಸಾಗುತ್ತೇನೆ.ಈ ರೀತಿಯಾಗಿ ಮಾಡಿದರೆ ಮನೆಯಲ್ಲಿ ಎಲ್ಲರೂ ಚೆನ್ನಾಗಿರುತ್ತಾರೆ. ಇಲ್ಲದಿದ್ದರೆ ಏನೋ ಆಗಿಬಿಡುತ್ತದೆ ಎಂದುಕೊಂಡು ಮನಶ್ಯಾಂತಿ ಕಳೆದುಕೊಂಡು ಮಾಡಿದ್ದನ್ನೇ ಮತ್ತೆ ಮತ್ತೆ ಅವರಿಗೇ ಬೇಸರವಾಗುವ ತನಕ ಮಾಡುತ್ತಿರುತ್ತಾರೆ. ಅದು ತಪ್ಪು ಎಂದು ತಿಳಿದರೂ ಕೂಡಾ ಮಾಡದೆ ಸುಮ್ಮನಿರಲಾರರು.

      ಮಕ್ಕಳ ವಿಷಯದಲ್ಲಿ ಇದಕ್ಕೆ ನಿವಾರಣೆಯೆಂದರೆ ಮನೆಯವರ ಎಚ್ಚರಿಕೆಗಳು.ಮತ್ತೆ ಮತ್ತೆ ಮಾಡಬೇಕೆಂದು ಆ ರೀತಿಯಾಗಿ ಮಾಡಿದರೆ ದೇವರಿಗೆ ಕೋಪ ಬರುತ್ತದೆಯೆಂದು, ಅವನು ಶಾಪ ಕೊಡುತ್ತಾನೆಂದು, ಆನಂತರ ಮಾಡಬೇಕಾದ ಕೆಲಸವನ್ನೂ ಮಾಡಲಾಗುವುದಿಲ್ಲವೆಂದು ಹೇಳಬೇಕು. ದೊಡ್ಡವರ ವಿಷಯದಲ್ಲಿ ಸ್ವಲ್ಪ ವಿಭಿನ್ನವಾಗಿ ಆಲೋಚಿಸಬೇಕು.

     ಮುಖ್ಯವಾಗಿ ಈ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು.ಸಾಮಾನ್ಯ ವಾಗಿ ತಾಯಂದಿರು ಈ ವಿಷಯವನ್ನು ತಿಳಿದುಕೊಳ್ಳಬೇಕು.

1. ಈ ಅತಿ  ಭದ್ರತೆ ನಿಜವಾಗಿಯೂ ಅಗತ್ಯವಿದೆಯೇ?2.  ಈ ಶುದ್ಧತೆಯನ್ನು ಅನುಸರಿಸದಿರುವವರು ಆರೋಗ್ಯವಾಗಿಲ್ಲವೇ?

 3.ಈ ಅತೀ ಭಕ್ತಿಯಿಂದಾಗಿ ಅಂದುಕೊಂಡ ಎಲ್ಲಾ ಕೆಲಸಗಳು ನಡೆದುಬಿಡುತ್ತವೆಯೇ?

4. ಈ ರೀತಿ ಮಾಡದಿದ್ದರೆ ದೇವರಿಗೆ ಕೋಪ ಬರುತ್ತೇವೆಯೇ (ದೇವರು ಕರುಣಾಮಯಿ)

5. ಇಷ್ಟು ಬಾರಿ ಮಾಡಬೇಕೆಂಬುದನ್ನು ನಿಲ್ಲಿಸಿ ಬಿಟ್ಟರೆ ಏನಾಗುತ್ತದೆ?

6. ಮಾಡಿದ ಕೆಲಸವನ್ನೇ ಮಾಡುವುದರಿಂದ ಮನೆಯಲ್ಲಿರುವವರಿಗೆ ತೊಂದರೆಯುಂಟಾಗುತ್ತದೆಯೇ?

7. ಕೈಗಳನ್ನು ಪದೇ ಪದೇ ತೊಡೆದುಕೊಳ್ಳುವುದರಿಂದ ಆರೋಗ್ಯ ಹಾಳಾಗುವುದಿಲ್ಲವೇ?

8. ಬಾತ್ ರೂಮ್ ನಲ್ಲಿ ಅಷ್ಟೊಂದು ನೀರನ್ನು ಉಪಯೋಗಿಸಬೇಕಾದ ಅಗತ್ಯವಿದೆಯೇ?

      ಇವುಗಳಿಗೆ ಉತ್ತರ “ಅಲ್ಲ “, “ಇಲ್ಲ”ವೆಂದು ಬರುತ್ತದೆ.ಆದ್ದರಿಂದ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಬೇಕು.ಇಲ್ಲದಿದ್ದಲ್ಲಿ ಈ ಸಮಸ್ಯೆಯಿಂದಾಗಿ ಮಕ್ಕಳಲ್ಲಿ ಬೇಸರ,ಕಿರಿಕಿರಿಗಳುಂಟಾಗಿ ಅದರ ಪ್ರಭಾವ ಅವರ ಓದಿನ ಮೇಲೆ ಬೀಳಬಹುದು. ಕೆಲವು ಸಂದರ್ಭಗಳಲ್ಲಿ ಮಕ್ಕಳು ಕೂಡಾ ಈ ಅಭ್ಯಾಸವನ್ನು ಮಾಡಿಕೊಳ್ಳಬಹುದು. ಶಿಕ್ಷಣ ಆರೋಗ್ಯ,ಆಸೆ,ಐಶ್ವರ್ಯಗಳ ವಿಷಯಗಳಲ್ಲಿ ಈ ರೀತಿಯ ಹುಚ್ಚು ಮೂಡನಂಬಿಕೆಯನ್ನು ಬಿಟ್ಟು ಸಮಸ್ಯೆಗಳ ಪರಿಹಾರದ ಬಗ್ಗೆ ಯೋಚಿಸಬೇಕು. ಈ ರೀತಿಯಾಗಿ ಆಲೋಚಿಸದೆ ಕೊನೆಗೆ ಮಾನಸಿಕ ಪಡೆದುಕೊಳ್ಳುವ ಹಂತಕ್ಕೆ ತಲುಪುವ ಮಂದಿಯೂ ಇದ್ದಾರೆ.

      ಆತ್ಮವಿಶ್ವಾಸ,ಬಿಹೇವಿಯರ್ ಥೆರಪಿ ಪಾಸಿಟಿವ್ ಥಿಂಕಿಂಗ್ ಜೊತೆಗೆ ಈ ಸಮಸ್ಯೆಗೆ ಯೋಗ, ಸೆಲ್ಫ್ ಹಿಪ್ಲಾಟಿಜಂ  ಮತ್ತು ಕೌನ್ಸೆಲಿಂಗ್ ಉತ್ತಮವಾಗಿ ಅಹಾಯಕವಾಗುತ್ತವೆ. ಆಗಲೂ ಅವರು ಬದಲಾಗದಿದ್ದರೆ ಸೈಕಿಯಾಟ್ರಿಸ್ಟ್ ಭೇಟಿಯಾಗುವುದೊಂದೇ ಮಾರ್ಗ.

 ಕೂದಲು ಕಿತ್ತುಕೊಳ್ಳುವ ಮಕ್ಕಳು

     ಈ ಸಮಸ್ಯೆಯನ್ನು ‘ಟ್ರಿಕಿಲೊ ಮಾನಿಯಾ’ ಎನ್ನುತ್ತಾರೆ.ಈ ಸಮಸ್ಯೆಯಿರುವ ಮಕ್ಕಳು,ತಮ್ಮ ತಲೆ ಕೂದಲುಗಳನ್ನು ಬೆರಳಿಗೆ ಉಂಗುರದ ಹಾಗೆ ಸುತ್ತಿಕೊಂಡು ಪಟ್ ಎಂದು ಎಳೆದುಬಿಡುತ್ತಾರೆ.ಆ ಸಮಯದಲ್ಲಿ ಅದೆಷ್ಟೇ ನೋವು,ಉರಿಯದರೂ ಒಂದು ರೀತಿಯ ಆನಂದವನ್ನು ಅನುಭವಿಸುತ್ತಾರೆ.ತಮಗರಿವಿಲ್ಲದೇ ಬೆರಳುಗಳು ತಲೆಗೆ ಹೋಕ್ಕಿ ನಾಟ್ಯ ಮಾಡುತ್ತವೆ.ಕೆಲವು ಹೆಣ್ಣು ಮಕ್ಕಳು ಈ ರೀತಿ ಕೂದಲು ಕಿತ್ತುಕೊಳ್ಳುವುದರಿಂದ ತಲೆಯ ಮೇಲೆ ಪ್ಯಾಚಸ್ ಕಾಣಿಸುತ್ತವೆ. ತಲೆಬುರುಡೆ ಕಾಣಿಸುತ್ತದೆ. ಆದರೂ ಅದನ್ನು ನಿಲ್ಲಿಸಲಾರರು.ಅಗತ್ಯವೆನಿಸಿದರೆ ತಲೆಗೆ ಬಣ್ಣದ ಬಟ್ಟೆಯೊಂದನ್ನು ಸುತ್ತಿಕೊಂಡು ಫ್ಯಾಷನ್ ಮಾಡಿಕೊಂಡು ಹೋಗುತ್ತಾರೆ.

    . ಇದಕ್ಕೆ ಕಾರಣ ಹೆಚ್ಚು ಒತ್ತಡಗಳು, ಅಧಿಕ ಆಲೋಚನೆಗಳು ಮತ್ತು ಆತಂಕಗಳೇ ಎನ್ನುತ್ತಾರೆ ಕೈಯ ಸೈಕಾಲಜಿಸ್ಟ್ ಗಳು.ಈ ಆತಂಕಗಳಿಗೆ ಹೋಲಿಸಿದರೆ,ಕೂದಲು ಕೇಳುವುದರಿಂದ ಉಂಟಾಗುವ ನೋವು ಕಡಿಮೆಯೆಂದು ಅವರು ಭಾವಿಸುತ್ತಾರೆ.ಈ ಸಮಸ್ಯೆಗೆ ಪರಿಹಾರವಿದೆ.ಇದರೊಂದಿಗೆ ತಾಯಿ ತಂದೆಯರು ಪ್ರೀತಿಯಿಂದ ಮಾತನಾಡುತ್ತಾ. ಅವರಿಗಿರುವ ಅನುಮಾನಗಳಿಗೆ ಆತಂಕಗಳಿಗೆ ಕಾರಣವೇನೆಂಬುದನ್ನು ತಿಳಿದುಕೊಳ್ಳಬೇಕು. ಅದು ಬಹಳ ಸಣ್ಣ ಕಾರಣವೇ ಆಗಿರಬಹುದು ಅಂಕಗಳು ಸರಿಯಾಗಿ ಬರುತ್ತಿಲ್ಲವೆಂತಲೋ ಮನೆಯಲ್ಲಿ ತನಗಿಂತ  ಬೇರೆಯವರಿಗೇ ಬೆಲೆ ಕೊಡುತ್ತಿದ್ದಾರೆ…. ಈ ರೀತಿಯಾಗಿ ಯಾವುದಾದರೂ ಆಗಿರಬಹುದು.ಪ್ರಾರಂಭದ ಹಂತದಲ್ಲಿ ಹೆತ್ತವರು,ಸ್ವಲ್ಪ ಹೆಚ್ಚಾಗಿದ್ದರೆ ಸೈಕಾಲಜಿಸ್ಟ್ ಗಳು, ತೀರ ಹೆಚ್ಚಾಗಿದ್ದಾರೆ ಔಷಧಿಗಳ ಮೂಲಕ ಸೈಕಿಯಾಟ್ರಿಸ್ಟ್ ಗಳು  ಗುಣಪಡಿಸಬಲ್ಲರು ಸಾಮಾನ್ಯವಾಗಿ ಈ ಸಮಸ್ಯೆ ಪುರುಷರಲ್ಲಿ ಕಡಿಮೆ.