ಮುಜಾಫರ್ಪುರ(ಬಿಹಾರ): ಮಾನಸಿಕ ಅಸ್ವಸ್ಥ ಮಗನೊಬ್ಬ ಪೋಷಕರನ್ನೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ ನಡೆದಿದೆ.
ಮುಜಾಫರ್ಪುರ ಜಿಲ್ಲೆಯ ಪಾರು ಪೊಲೀಸ್ ಠಾಣಾ ವ್ಯಾಪ್ತಿಯ ಜಾಫರ್ಪುರ ಖುತಾಹಿ ಗ್ರಾಮದ ನಿವಾಸಿ ಅಜಯ್ ಸಾಹ್ನಿ ಕೊಲೆ ಮಾಡಿದ ಆರೋಪಿ. ಆರೋಪಿ ಮೊದಲು ತಂದೆ – ತಾಯಿಯನ್ನು ಮನಬಂದಂತೆ ಥಳಿಸಿದ್ದು, ಬಳಿಕ ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆರೋಪಿ ಪೋಷಕರನ್ನು ಕೊಲೆ ಮಾಡಲು ಮುಂದಾದಾಗ ಸಹೋದರಿ ಜ್ಯೋತಿ ತಡೆಯುಲು ಬಂದಿದ್ದಳು. ಆಗ ಆರೋಪಿ ಆಕೆಯನ್ನು ಕೊಲ್ಲಲು ಮುಂದಾಗಿದ್ದು, ಕೂಡಲೇ ಯುವತಿ ಆತನಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗಡೆ ಬಂದು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದರು. ಕೂಡಲೇ ಗ್ರಾಮಸ್ಥರು ಆರೋಪಿಯನ್ನು ಮನೆಯಲ್ಲಿಯೇ ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಖಾಕಿ ಪಡೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ.