ಮೈಸೂರು : ಮೈಸೂರು ಎಕ್ಸಿಬಿಷನ್ ಮತ್ತಷ್ಟು ಆಕರ್ಷಕವಾಗಿದ್ದು, ಹೊಸದಾಗಿ ಆರಂಭಿಸಲಾಗಿರುವ ಡ್ರ್ಯಾಗನ್ ಪಾಂಡ್ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಡ್ರ್ಯಾಗನ್ ಪಾಂಡ್ ಲೋಕಾರ್ಪಣೆ ಮಾಡಿದ್ದು, ಪ್ರವಾಸಿಗರಿಗೆ ಮತ್ತಷ್ಟು ರೋಮಾಂಚನ ಅನುಭವ ನೀಡಲಿದೆ.
ಇನ್ನು ಡ್ರ್ಯಾಗನ್ ಪಾಂಡ್ ಉದ್ಘಾಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹರ್ಷವ್ಯಕ್ತಪಡಿಸಿದ್ದು, ಟ್ವಿಟ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು, ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಸೇರಿ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.
ಸಿಎಂ ಸಿದ್ದರಾಮಯ್ಯ ಟ್ವಿಟ್ ನಲ್ಲಿ ಏನಿದೆ..? – ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ನಿರ್ಮಿಸಿರುವ ವರ್ಣರಂಜಿತ “ಡ್ರಾಗನ್ ಪಾಂಡ್” ಅನ್ನು ಲೋಕಾರ್ಪಣೆಗೊಳಿಸಿದೆ.
ನಾಡಿನ ಸಾಂಸ್ಕೃತಿಕ ಹಾಗೂ ಐತಿಹಾಸಿಕ ನಗರವಾದ ಮೈಸೂರಿಗೆ ದೇಶ ವಿದೇಶಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇದು ನಗರವನ್ನು ಮತ್ತಷ್ಟು ಆಕರ್ಷಕ ಹಾಗೂ ಪ್ರೇಕ್ಷಣೀಯ ತಾಣವಾಗಿಸಲಿದೆ ಎಂದು ಬರೆದುಕೊಂಡಿದ್ದಾರೆ.














