ಮನೆ ಅಪರಾಧ ಲಾರಿಗಳ ನಡುವೆ ಅಪಘಾತ: ಓರ್ವ ಸಾವು

ಲಾರಿಗಳ ನಡುವೆ ಅಪಘಾತ: ಓರ್ವ ಸಾವು

0

ತುಮಕೂರು(Tumkur): ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಬ್ಬಿ ಪಟ್ಟಣದ ಹೊರವಲಯದ ಸಿಂಗೋನಹಳ್ಳಿ ಸೇತುವೆ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಕೋಳಿ ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂದ ಪೊಲೀಸರು ವಾಹನ ತೆರವುಗೊಳಿಸಿದರು.

ಹಿಂದಿನ ಲೇಖನಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಯಶಸ್ವಿಗೊಳಿಸುವ ಕುರಿತು ಸಭೆ
ಮುಂದಿನ ಲೇಖನಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ: ಜೆ.ಪಿ. ಗೋಪಾಲಕೃಷ್ಣ ಪಣಿಕರ್ ಮಾಹಿತಿ