ಮನೆ ಅಪರಾಧ ಸೆಕೆ ಎಂದು ಬಾವಿಯಲ್ಲಿ ಈಜಲು ಹೋದವನು ಶವವಾಗಿ ಪತ್ತೆ

ಸೆಕೆ ಎಂದು ಬಾವಿಯಲ್ಲಿ ಈಜಲು ಹೋದವನು ಶವವಾಗಿ ಪತ್ತೆ

0

ಬೆಳಗಾವಿ : ಬಿಸಿಲಿನ ತಾಪಕ್ಕೆ ಹೈರಾಣರಾಗಿ ಬಾವಿಯಲ್ಲಿ ಈಜಲು ಹೋಗಿ ಯುವಕ ಮೃತಪಟ್ಟ ಘಟನೆ ಅನಂತಪೂರ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅನಂತಪೂರ ಗ್ರಾಮದ ಶಿವಾನಂದ ಮೇತ್ರಿ (೨೧) ಸಂಜೆ ೪ರ ವೇಳೆ ಮನೆಯಲ್ಲಿ ಹೇಳದೆ ಈಜಲು ಹೋಗಿದ್ದಾನೆ. ರಾತ್ರಿಯಾದರು ಮನೆಗೆ ಬಾರದ ಹಿನ್ನಲೆ ಪೋಷಕರು ಭಯ ಪಟ್ಟು, ಎಲ್ಲೆಡೆ ಹುಡುಕಲು ಆರಂಭಿಸಿದ್ದಾರೆ. ಆದ್ರೆ ಇಂದು ಬೆಳಗ್ಗೆ ಮತ್ತೆ ಹುಡುಕಾಟ ನಡೆಸಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಶವವನ್ನು ಹೊರತೆಗೆಯಲಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನೂ ಮುಂದೆ ಯಾರೂ ಈಜಲು ಹೋಗದಂತೆ ತಿಳಿಸಿದ್ದಾರೆ.

ಹಿಂದಿನ ಲೇಖನವಾಟ್ಸಾಪ್‌ ನಲ್ಲಿ ಬಿಜೆಪಿ ಪರ ಪ್ರಚಾರದ ಸಂದೇಶ ರವಾನೆ: ಸರ್ಕಾರಿ ನೌಕರನ ಅಮಾನತು ಆದೇಶಕ್ಕೆ ಹೈಕೋರ್ಟ್‌ ತಡೆ
ಮುಂದಿನ ಲೇಖನನನ್ನ ವಿರುದ್ಧ ಷಡ್ಯಂತ್ರ ನಡೆಸಿದ ರಾಘವೇಂದ್ರ ವಿರುದ್ಧ ಎಫ್ಐಆರ್ ದಾಖಲಿಸಬೇಕು: ಕೆ.ಎಸ್ ಈಶ್ವರಪ್ಪ