ಮನೆ ಅಪರಾಧ ರಸ್ತೆ ಅಪಘಾತ ಕಂಡ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

ರಸ್ತೆ ಅಪಘಾತ ಕಂಡ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

0

ತೆಲಂಗಾಣ:  ರಸ್ತೆ ಅಪಘಾತವೊಂದನ್ನು ಕಣ್ಣಾರೆ ಕಂಡ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟಿರುವ ಈ ಘಟನೆ ತೆಲಂಗಾಣದ ವಿಕಾರಾಬಾದ್​ನಲ್ಲಿ ನಡೆದಿದೆ.

ವಿಕಾರಾಬಾದ್​ನ ಬಶೀರಾಬಾದ್​ನ ವಲಯದ ನಿವಾಸಿಯಾದ ಸುದರ್ಶನ್ ​​ಗೌಡ್ ಎಂಬುವವರ​ ಪುತ್ರ ಯಶ್ವಂತ್​ ಗೌಡ್​​ (16) ಮೃತಪಟ್ಟ ವಿದ್ಯಾರ್ಥಿ.  ಯಶ್ವಂತ್​ ಗೌಡ್ ವಿಕಾರಾಬಾದ್​ನ ಖಾಸಗಿ ಕಾಲೇಜೊಂದರಲ್ಲಿ ಮೊದಲ ವರ್ಷದ ಇಂಟರ್​ಮೀಡಿಯೇಟ್ ಓದುತ್ತಿದ್ದ .

ಸೋಮವಾರ ಬಶೀರಾಬಾದ್​​ನಿಂದ ಜೀವಾಂಗಿ ಎಂಬ ಗ್ರಾಮದಿಂದ ಬೈಕ್​ನಲ್ಲಿ ಬರುತ್ತಿದ್ದ ವ್ಯಕ್ತಿಯೋರ್ವ ಬೈಕ್ ಸ್ಕಿಡ್ ಆಗಿ ಉರುಳಿಬಿದ್ದಿದ್ದಾನೆ. ಇದನ್ನು ನೋಡಿದ ಯಶ್ವಂತ್​ ಗೌಡ್ ಆಘಾತಕ್ಕೆ ಒಳಗಾಗಿ ಸ್ಥಳದಲ್ಲಿಯೇ ಮೂರ್ಛೆ ತಪ್ಪಿ ಬಿದ್ದಿದ್ದಾನೆ. ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಶ್ವಂತ್​ನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತಕ್ಕೊಳಗಾದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸದ್ಯ ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾನೆ ಎಂದು ತಿಳಿದುಬಂದಿದೆ.

ಹಿಂದಿನ ಲೇಖನಕೆಎಸ್​ಆರ್​​ಟಿಸಿ ಬಸ್- ಕಾರು ಮುಖಾಮುಖಿ ಡಿಕ್ಕಿ: ಐವರು ವಿದ್ಯಾರ್ಥಿಗಳು ಸಾವು
ಮುಂದಿನ ಲೇಖನಒಪ್ಪಂದ ವ್ಯಾಜ್ಯಗಳಲ್ಲಿ ಕ್ರಿಮಿನಲ್ ಕಾನೂನು ಬಳಕೆ ಸಲ್ಲ: ಹೈಕೋರ್ಟ್