ಮನೆ ಅಪರಾಧ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ

ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ

0

ದೊಡ್ಡಬಳ್ಳಾಪುರ: ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಕಾಳುಮಾತ್ರೆ ಸೇವಿಸಿ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ನಿವಾಸಿ ಬಾಲಾಜಿ (23) ಮೃತಪಟ್ಟಿದ್ದಾನೆ.

ಬಾಲಾಜಿಗೆ ಒಂದು ವರ್ಷದ ಹಿಂದೆ ಇನ್ಸ್ಟಾಗ್ರಾಮ್‌ನಲ್ಲಿ ಕನಕಪುರ ಮೂಲದ ಯುವತಿಯೋರ್ವಳು ಪರಿಚಯವಾಗಿದ್ದಳು. ಇಬ್ಬರ ಆತ್ಮೀಯತೆ, ಪರಿಚಯವು ಪ್ರೀತಿಗೆ ತಿರುಗಿತ್ತು. ಪ್ರೀತಿ- ಪ್ರೇ‌ಮದ ಗುಂಗಿನಲ್ಲಿ ಇಬ್ಬರು ಒಟ್ಟೊಟ್ಟಿಗೆ ಸುತ್ತಾಡಿದ್ದಾರೆ. ಎಲ್ಲ ಕಡೆ ಜತೆಯಾಗಿ ಸುತ್ತಾಡಿ ಕೊನೆಗೆ ಬೇರೊಬ್ಬನ ಜತೆ ಲವ್‌ ನಲ್ಲಿರುವುದಾಗಿ ಹೇಳಿ ಕೈಕೊಟ್ಟಿದ್ದಾಳೆ ಎನ್ನಲಾಗಿದೆ. ಮದುವೆ ಮಾಡಿಕೊಳ್ಳೋಣ ಅಂದಿದ್ದಕ್ಕೆ ಮನೆಯಲ್ಲಿ ಒಪ್ಪಲ್ಲ ಎಂದಿದ್ದಾಳಂತೆ. ಜತೆಗೆ ಬೇರೆ ಯುವಕನ ಜತೆ ಲವ್‌ನಲ್ಲಿರುವುದಾಗಿ ಹೇಳಿದ್ದಳಂತೆ. ಈ ಹಿನ್ನೆಲೆಯಲ್ಲಿ ಮನನೊಂದು ಬಾಲಾಜಿ ಕಾಳುಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆಮೆಜಾನ್‌ ನಲ್ಲಿ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಬಾಲಾಜಿ , ಬಡ ಕುಟುಂಬಕ್ಕೆ ಆಧಾರವಾಗಿದ್ದ. ಆದರೆ ಇದೀಗ ಮಗನ ದುರಂತ ಅಂತ್ಯ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯುವತಿ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಮೃತ ಕುಟುಂಬಸ್ಥರು ದೂರು ನೀಡಿದ್ದಾರೆ.

ಹಿಂದಿನ ಲೇಖನಅಜ್ಜಂಪುರ ಕ್ರಾಸ್‌ ನಲ್ಲಿ ಕೆಎಸ್‌ ಆರ್‌ ಟಿಸಿಯ ಐರಾವತ ಬಸ್‌ ನಲ್ಲಿ ಬೆಂಕಿ: ಪ್ರಯಾಣಿಕರು ಪಾರು
ಮುಂದಿನ ಲೇಖನಪೆನ್‌ ಡ್ರೈವ್ ಪ್ರಕರಣ: ಲಿಖಿತ್ ಗೌಡ, ಚೇತನ್ ಜಾಮೀನು ಅರ್ಜಿ ವಜಾ