ಶಿವಮೊಗ್ಗ : ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಲು ಗ್ರಾಮದಲ್ಲಿ ಭೀಕರ ದುರ್ಘಟನೆ ನಡೆದಿದೆ. ಬೇಟೆಗೆ ತೆರಳಿದ್ದ ಯುವಕನೊಬ್ಬ ಬಂದೂಕು ಮಿಸ್‌ಫೈರ್ ಆಗಿದ ಪರಿಣಾಮವಾಗಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಗ್ರಾಮದಲ್ಲಿ ತೀವ್ರ ಆತಂಕ ಹಾಗೂ ದುಃಖದ ವಾತಾವರಣವನ್ನು ನಿರ್ಮಿಸಿಸಿದೆ.
ಮೃತ ಯುವಕನನ್ನು ಕೊಳಾವರ ಗ್ರಾಮದ ಗೌತಮ್ (25) ಎಂದು ಗುರುತಿಸಲಾಗಿದೆ. ಬೇಟೆಗೆಂದು ಹೋಗಿದ್ದ ಸಂದರ್ಭದಲ್ಲಿ ಪ್ರಾಣಿಯೊಂದನ್ನು ಹೊಡೆಯಲು ಹೋಗಿ ಮಿಸ್ ಫೈರ್ ಆಗಿದೆ. ಈ ವೇಳೆ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಯುವಕರ ಗುಂಪು ಕಟ್ಟೆಹಕ್ಲುಗೆ ಬೇಟೆಗಾಗಿ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.














