ಮನೆ ಸುದ್ದಿ ಜಾಲ ಕಂಟ್ರೋಲ್ ರೂಂ, ಚೆಕ್ ಪೋಸ್ಟ್ ಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಕಂಟ್ರೋಲ್ ರೂಂ, ಚೆಕ್ ಪೋಸ್ಟ್ ಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

0

ಹುಣಸೂರು: ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಇಲ್ಲಿನ ಸ್ಟಾಂಗ್ ರೂಂ, ಕಂಟ್ರೋಲ್ ರೂಂ, ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಚುನಾವಣಾ ಸಿದ್ದತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಮಾ. 31ರ ಶುಕ್ರವಾರ ಬೆಳಗ್ಗೆ ತಾಲೂಕಿನ ಮನುಗನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ವೀಕ್ಷಿಸಿ, ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.

ನಂತರ ನಗರದ ಸಂತ ಜೋಸೆಫರ ಶಾಲೆಯ ಮಸ್ಟರಿಂಗ್-ಡಿಮಸ್ಟರಿಂಗ್, ಸ್ಟಾಂಗ್ ರೂಂನ ಸ್ಥಳ ಪರಿಶೀಲಿಸಿ, ಕೆಲ ಸಲಹೆ ನೀಡಿದರು.

ತಾಲೂಕು ಕಚೇರಿಯ ಕಂಟ್ರೋಲ್ ರೂಂ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ವೀಕ್ಷಿಸಿದ ನಂತರ ಉಪ ವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಚುನಾವಣಾ ಸಿದ್ದತೆ ಕುರಿತು ಮಾಹಿತಿ ಪಡೆದುಕೊಂಡು ಕೆಲ ಸೂಚನೆಗಳನ್ನು ನೀಡಿದರು.

ಜಿಲ್ಲಾಧಿಕಾರಿಗಳೊಂದಿಗೆ ಚುನಾವಣಾಧಿಕಾರಿ ರುಚಿ ಬಿಂದಾಲ್, ನೋಡಲ್ ಅಧಿಕಾರಿ ಬಿ.ಕೆ.ಮನು, ಉಪ ಚುನಾವಣಾಧಿಕಾರಿ ಡಾ.ಅಶೋಕ್, ಪ್ರೊಬೇಷನರಿ ತಹಸೀಲ್ದಾರ್ ನೂರಲ್ ಹುಧಾ, ಚುನಾವಣಾ ಶಿರಸ್ತೆದಾರ್ ಕಿರಣ್ ಕುಮಾರ್ ಇದ್ದರು.

ಹಿಂದಿನ ಲೇಖನಎಸ್’ಎಸ್’ಎಲ್’ಸಿ ವಿದ್ಯಾರ್ಥಿಗಳಿಗೆ 26 ಗ್ರೇಸ್‌ ಮಾರ್ಕ್ಸ್
ಮುಂದಿನ ಲೇಖನಏಪ್ರಿಲ್ 8, 9 ರಂದು ಬಂಡೀಪುರಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ