ಮನೆ ಅಪರಾಧ ಆನ್‌ ಲೈನ್ ಮೊಬೈಲ್ ಗೇಮ್‌ ನ ಪಾಸ್‌ ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ ಯುವಕನನ್ನು ಹತ್ಯೆಗೈದ ಸ್ನೇಹಿತರು

ಆನ್‌ ಲೈನ್ ಮೊಬೈಲ್ ಗೇಮ್‌ ನ ಪಾಸ್‌ ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ ಯುವಕನನ್ನು ಹತ್ಯೆಗೈದ ಸ್ನೇಹಿತರು

0

ಪಶ್ಚಿಮ ಬಂಗಾಳ: ಆನ್‌ ಲೈನ್ ಮೊಬೈಲ್ ಗೇಮ್‌ ನ (ಫ್ರೀ ಫೈರ್) ಪಾಸ್‌ ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಯುವಕನನ್ನು ಅವನ ನಾಲ್ವರು ಸ್ನೇಹಿತರು ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿದ್ದ ಪಾಪೈ ದಾಸ್ (18) ಶವ ಜನವರಿ 15 ರಂದು ಕಾಡಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕನ ತಾಯಿ ಪೂರ್ಣಿಮಾ ದಾಸ್ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಲಾಗಿತ್ತು. ಈ ಐವರು ಕ್ವಾರ್ಟರ್ಸ್​ ಒಂದರಲ್ಲಿ ಆನ್​ಲೈನ್​ ಆಟಗಳನ್ನು ಆಡುತ್ತಿದ್ದರು. ಯುವಕ ಸಜೆ 8 ಗಂಟೆಗೆ ಮನೆಯಿಂದ ಹೊರ ಹೋದವನು ವಾಪಸ್ ಬಂದಿರಲಿಲ್ಲ. ಆತನನ್ನು ಕೊಂದ ಸ್ನೇಹಿತರು ತಮ್ಮ ಬೈ ಕ್​ಗಳಿಂದ ಪೆಟ್ರೋಲ್ ತೆಗೆದು ಯುವಕನನ್ನು ಸುಟ್ಟುಹಾಕಿದ್ದಾರೆ.

ಕೊಲೆಯಲ್ಲಿ ಭಾಗಿಯಾಗಿದ್ದ ನಾಲ್ವರು ಅಪ್ರಾಪ್ತ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ನಾಳೆ ಜಿಲ್ಲಾ ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.