ಮನೆ ಕಾನೂನು ಕೋರ್ಟ್‌ಗೆ ಹಾಜರಾತಿ: ವಿಜಯ ಮಲ್ಯಗೆ ಸುಪ್ರೀಂ ಕೋರ್ಟ್ ನಿಂದ ಕೊನೆಯ ಅವಕಾಶ

ಕೋರ್ಟ್‌ಗೆ ಹಾಜರಾತಿ: ವಿಜಯ ಮಲ್ಯಗೆ ಸುಪ್ರೀಂ ಕೋರ್ಟ್ ನಿಂದ ಕೊನೆಯ ಅವಕಾಶ

0

ಹೊಸದಿಲ್ಲಿ : ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವ್ಯಕ್ತಿಗತವಾಗಿ ಹಾಜರಾಗಲು ಉದ್ಯಮಿ ವಿಜಯ್ ಮಲ್ಯ ಅವರಿಗೆ ಸುಪ್ರೀಂ ಕೋರ್ಟ್ ಕಡೆಯ ಅವಕಾಶವನ್ನು ನೀಡಿದೆ.

ಸುಮಾರು ೯೦೦೦ ಕೋಟಿ ರೂ.ಗಳಷ್ಟು ಬ್ಯಾಂಕ್ ಸಾಲವನ್ನು ಸುಸ್ತಿ ಉಳಿಸಿಕೊಂಡಿರುವ ಪ್ರಕರಣದಲ್ಲಿ, ವ್ಯಕ್ತಿಗತವಾಗಿ ಅಥವಾ ತಮ್ಮ ವಕೀಲರ ಮೂಲಕ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.

ಮಲ್ಯ ಅವರಿಗೆ ಈ ಸಂಬಂಧ ಈಗಾಗಲೇ ಹಲವು ಅವಕಾಶ ನೀಡಲಾಗಿದೆ. ಅಲ್ಲದೆ, ನವೆಂರ್ಬ ೩೦, ೨೦೨೧ರಂದು ನೀಡಿದ ಆದೇಶದಲ್ಲಿ ಸ್ಪಷ್ಟ ನಿರ್ದೇಶನವನ್ನು ನೀಡಲಾಗಿತ್ತು ಎಂದು ಕೋರ್ಟ್ ಉಲ್ಲೇಖಿಸಿತು.

ಹಿಂದಿನ ಲೇಖನಏರ್ ಟೆಲ್ ಇಂಟರ್ ನೆಟ್ ಸೇವೆಯಲ್ಲಿ ಅಲ್ಪಾವಧಿ ವ್ಯತ್ಯಯ: ಕ್ಷಮೆಯಾಚನೆ
ಮುಂದಿನ ಲೇಖನಭೂಮಾಪನ ಶುಲ್ಕ ಇಳಿಸಿದ ಸರ್ಕಾರ