ಮನೆ ರಾಷ್ಟ್ರೀಯ ಗುರುತಿನ ಚೀಟಿಗೆ ಆಧಾರ್‌ ಜೋಡಣೆ: ಶೀಘ್ರದಲ್ಲೇ ನಿಯಮ ಪ್ರಕಟ

ಗುರುತಿನ ಚೀಟಿಗೆ ಆಧಾರ್‌ ಜೋಡಣೆ: ಶೀಘ್ರದಲ್ಲೇ ನಿಯಮ ಪ್ರಕಟ

0

ನವದೆಹಲಿ (New Delhi)- ಗುರುತಿನ ಚೀಟಿ ಜೊತೆಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡುವ ಕುರಿತು ಸರ್ಕಾರ ಶೀಘ್ರದಲ್ಲಿಯೇ ನಿಯಮಗಳನ್ನು ಪ್ರಕಟಿಸಲಿದೆ.

ಈ ಬಗ್ಗೆ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ ಅವರು, ಆಧಾರ್‌ ಸಂಖ್ಯೆ ಜೋಡಣೆ ಮಾಡುವುದನ್ನು ಮತದಾರರ ವಿವೇಚನೆಗೆ ಬಿಡಲಾಗುವುದು. ಅಕಸ್ಮಾತ್‌ ಜೋಡಣೆ ಮಾಡಲು ನಿರಾಕರಿಸಿದ್ದಲ್ಲಿ ಅದಕ್ಕೆ ಸೂಕ್ತ ಕಾರಣ ತಿಳಿಸುವುದು ಅಗತ್ಯವಾಗಿದೆ ಎಂದಿದ್ದಾರೆ.

ತಮ್ಮ ಅವಧಿಯಲ್ಲಿ ಜಾರಿಗೊಳಿಸಿದ ಎರಡು ಪ್ರಮುಖ ಸುಧಾರಣೆಗಳಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ವರ್ಷದಲ್ಲಿ ನಾಲ್ಕು ಬಾರಿ ಅವಕಾಶ ಕಲ್ಪಿಸಿದ್ದು ಹಾಗೂ ಮತದಾರರ ಹೆಸರು ಪುನರಾವರ್ತನೆ ತಪ್ಪಿಸಲು ಆಧಾರ್ ಸಂಖ್ಯೆಗೆ ಜೋಡಣೆ ಮಾಡುವುದು ಸೇರಿದೆ ಎಂದು ತಿಳಿಸಿದರು.