ಸೈಕಾಅಥಿರ್ವಾರಯುಕ್ತಾಕೃತಾಪ್ತಾಶೇಷೇಗುಣೇಭ್ರೇ ಭುವಿ ಬಹ್ನಿವಾಸಃ|
ಸೌಖ್ಯಾಯ ಹೋಮೇ ಶಶಿಯುಗ್ಮಶೇಷೇ ಪ್ರಾಣಾರ್ಥನಾಶೌ ದಿವಿ ಭೂತಲೇ ಚ ||
ಯಾವ ದಿನ ಮತ್ತು ತಿಥಿಯಲ್ಲಿ ಹೋಮ ಮಾಡುವುದಿದೆಯೋ ಶುಕ್ಲ ಪಕ್ಷದ ಪ್ರತಿಪಾದದಿಂದ ವರ್ತಮಾನ ತಿಥಿ ಮತ್ತು ರವಿವಾರದಿಂದ ಹಿಡಿದು ವರ್ತಮಾನದ ದಿನದವರೆಗೆ ಎಣಿಸಬೇಕು. ಎರಡೂ ಸಂಖ್ಯೆಗಳನ್ನು ಕೂಡಿಸಿ ಅದರಲ್ಲಿ ಒಂದನ್ನು ಕೂಡಿಸಬೇಕು, ನಂತರ ಮೂರರಿಂದ ಭಾಗಿಸಬೇಕು.ಒಂದು ವೇಳೆ ಶೇಷ ಮೂರು ಅಥವಾ ಶೂನ್ಯ ಮೂರು ಸೊನ್ನೆ ಉಳಿದರೆ, ಪೃಥ್ವಿಯ ಮೇಲೆ ಅಗ್ನಿ ಇರುತ್ತಾನೆ. ಇದರಲ್ಲಿ ಹೋಮ ಮಾಡುವುದರಿಂದ ಸುಖವಾಗುತ್ತದೆ. ಒಂದು ವೇಳೆ ಒಂದು ಉಳಿದರೆ ಆಕಾಶದಲ್ಲಿ ಅಗ್ನಿಯ ವಾಸವಿರುತ್ತದೆ,ಇದು ಪ್ರಾಣ ನಾಶ ಮಾಡುವಂಥದು. ಒಂದು ವೇಳೆ ಶೇಷ ಎರಡು ಉಳಿದರೆ ಪಾತಾಳದಲ್ಲಿ ಅಗ್ನಿಯಲ್ಲಿ ಅಗ್ನಿಯ ವಾಸವಿರುತ್ತದೆ, ಇದು ದನ ನಾಶ ಮಾಡುತ್ತದೆ.
ನವಾಹ್ನ ಗ್ರಹಣ :
ನವಾನ್ಯಂ ಸ್ಯಾಸತ್ ಚರಕ್ಷಿಪ್ರಮೃದುಭೇ ಸತ್ತನೌ ಶುಭಮಮ್ |
*ವಿನಾ ನಂದಾವಿಷಘಟೀಮಧುಪೌಷಾರ್ಕಿಭಭೂಮಿಜಾನ್ ||
ಚರಸಂಜ್ಞಕ, ಕ್ಷಿಪ್ರಸಂಜ್ಞಕ, ಮೃದುಸಂಜ್ಞಕ ನಕ್ಷತ್ರಗಳಲ್ಲಿ ಶುಭಲಗ್ನದಲ್ಲಿ ನಂದಾತಿಥಿ,ವಿಷಘಟೀ, ಚೈತ್ರ ಮತ್ತು ಪುಷ್ಪಮಾಸ, ಶನಿವಾರ, ಮಂಗಳವಾರ ಇವೆಲ್ಲವುಗಳನ್ನು ತೆಜಿಸಿ ನವಾನ್ನ ಗ್ರಹಣ ಶುಭವಾಗುವುದು.
ನಾವೆ ಮತ್ತು ಹಡಗು ನಿರ್ಮಾಣ :
ಯಾಮ್ಯತ್ರಯ ವಿಶಾಖೇಂದ್ರ ಸಾರ್ಪಪಿತ್ರ್ಯೇಶ ಭಿನ್ನಭೇ |
ಬೃಗ್ವಿಜ್ಯಾರ್ಕದಿನೇ ನೌಕಾಘಟನಂ ಸತ್ತನೌ ಶುಭಮ್||
ಭರಣಿ, ಕೃತಿಕಾ, ಜೇಷ್ಠಾ, ರೋಹಿಣಿ,ವಿಶಾಖಾ, ಆಶ್ಲೇಷಾ ಮಾಘಾ ಆರ್ದ್ರಾ ಇವುಗಳಿಗಿಂತ ಭಿನ್ನವಾದ ನಕ್ಷತ್ರಗಳಲ್ಲಿ,ಶುಕ್ರವಾರ, ಗುರುವಾರ, ರವಿವಾರದಲ್ಲಿ ಶುಭ ಲಗ್ನದಲ್ಲಿ ನೌಕೆಯ ನಿರ್ಮಾಣ ಮಾಡುವುದು ಶುಭವಾದುದು.