ಮನೆ ಸುದ್ದಿ ಜಾಲ ಗಾಂಧಿಧಾಮ್ ಪುರಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ: ಪ್ರಯಾಣಿಕರು ಪಾರು

ಗಾಂಧಿಧಾಮ್ ಪುರಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ: ಪ್ರಯಾಣಿಕರು ಪಾರು

0

ನಂದೂರ್ಬಾರ್ಮಹಾರಾಷ್ಟ್ರದ ನಂದೂರ್ಬಾರ್ ರೈಲು ನಿಲ್ದಾಣದ ಬಳಿ ಶನಿವಾರ ಗಾಂಧಿಧಾಮ್- ಪುರಿ ಎಕ್ಸ್ ಪ್ರೆಸ್ ರೈಲಿನ ಪ್ಯಾಂಟ್ರಿ ಬೋಗಿಯೊಳಗೆ ಹಠಾತ್ ಬೆಂಕಿ ಕಾಣಸಿಕೊಂಡಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ.

ಗಾಂಧಿ ಧಾಮ್- ಪುರಿ ಎಕ್ಸ್ ಪ್ರೆಸ್ ರೈಲು ಇಂದು ಬೆಳಗ್ಗೆ ಸುಮಾರು 10-35ಕ್ಕೆ  ನಂದೂರ್ಬಾರ್ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ರೈಲಿನ ಪ್ಯಾಂಟ್ರಿ ಬೋಗಿಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. 

ಈ  ಸುದ್ದಿ ತಿಳಿಯುತ್ತಿದ್ದಂತೆ ನಿಲ್ದಾಣದಲ್ಲಿದ್ದ ಬೆಂಕಿ ನಿರೋಧಕ ತಂಡ ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯ ಜ್ವಾಲೆಯನ್ನು ನಂದಿಸಿರುವುದಾಗಿ ರೈಲ್ವೆ ಸಚಿವಾಲಯ ತಿಳಿಸಿದೆ. ಪ್ಯಾಂಟ್ರಿ ಕಾರ್ ರೈಲಿನಿಂದ ಪ್ರತ್ಯೇಕವಾಗಿರುತ್ತದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಅವರಿಗೆ ಯಾವುದೇ ಅಪಾಯವಾಗದಂತೆ ಸ್ಥಳಾಂತರಿಸಲಾಯಿತು. ಬೆಂಕಿಯಿಂದ ಆದ ನಷ್ಟದ ಬಗ್ಗೆ ಇನ್ನೂ ಯಾವುದೇ ವರದಿ ಬಂದಿಲ್ಲ.

ವೈದ್ಯಕೀಯ ತಂಡ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪ್ರಯಾಣಿಕರಿಗೆ ಉಪಚರಿಸಿದ್ದು, ಯಾರಿಗೂ ಗಾಯವಾಗಿಲ್ಲ. ಈ ರೈಲು ಒಟ್ಟು 22 ಬೋಗಿಗಳನ್ನು ಒಳಗೊಂಡಿತ್ತು. ಪ್ಯಾಂಟ್ರಿ ಕಾರು 13ನೇ ಬೋಗಿ ಆಗಿತ್ತು ಎಂದು ಪಶ್ಚಿಮ ರೈಲ್ವೆ ಮಾಹಿತಿ ನೀಡಿದೆ. 

ಹಿಂದಿನ ಲೇಖನನಾಯ್ಕರ ಸಾಧನೆ ದೇಶಕ್ಕೆ ಮಾತ್ರವಲ್ಲ; ಜಗತ್ತಿಗೇ ಸ್ಫೂರ್ತಿ: ಪೇಜಾವರ ಶ್ರೀ
ಮುಂದಿನ ಲೇಖನಬುದ್ದಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಎಎಸ್ ಐ ಅಪರಾಧಿ ಎಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ