ಮನೆ Uncategorized ಲಾರಿ – ಬೈಕ್ ಮಧ್ಯೆ ಅಪಘಾತ: ನಿವೃತ್ತ ಸಿಆರ್ ಪಿಎಫ್ ಯೋಧ ಸಾವು

ಲಾರಿ – ಬೈಕ್ ಮಧ್ಯೆ ಅಪಘಾತ: ನಿವೃತ್ತ ಸಿಆರ್ ಪಿಎಫ್ ಯೋಧ ಸಾವು

0

ಕಲಬುರಗಿ: ನಗರದ ಆಳಂದ ರಸ್ತೆಯ ಕೆರಿಬೋಸಗಾ ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಇಂದು ಲಾರಿ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ನಿವೃತ್ತ ಸಿಆರ್ ಪಿಎಫ್ ಯೋಧ ಮಾರುತಿ ಕಾಶಿನಾಥ ಘೋಡಕೆ (56) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆಳಂದ ತಾಲ್ಲೂಕಿನ ಸಾವಳೇಶ್ವರ ಗ್ರಾಮದ ಮಾರುತಿ ಅವರು ಕಲಬುರಗಿಯತ್ತ ಬೈಕ್ ನಲ್ಲಿ ಬರುತ್ತಿದ್ದರು‌. ಈ ವೇಳೆ ಮಹಾರಾಷ್ಟ್ರ ನೋಂದಣಿ ಹೊಂದಿದ ಲಾರಿ ಬೈಕ್ ಓವರ್ ಟೇಕ್ ಮಾಡಿ ಹೋಗುವಾಗ ಬೈಕ್ ಲಾರಿಯಡಿ ಸಿಲುಕಿದೆ.

ತಲೆಯ ಭಾಗ ಹಾಗೂ ಕಾಲಿನ ಮೇಲೆ ಲಾರಿಯ ಚಕ್ರ ಹಾಯ್ದು ಹೋಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟರು.

ಸ್ಥಳಕ್ಕೆ ಸಂಚಾರ ಠಾಣೆ-2ರ ಪೊಲೀಸರು ಭೇಟಿ ನೀಡಿದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಂಬುಲೆನ್ಸ್ ನಲ್ಲಿ ಜಿಮ್ಸ್ ಗೆ ಕಳುಹಿಸಲಾಯಿತು.