ಮನೆ ರಾಷ್ಟ್ರೀಯ ಟ್ರಕ್‌ ಹಾಗೂ ಇತರ ಎರಡು ವಾಹನಗಳ ನಡುವೆ ಅಪಘಾತ: ಮೂವರ ಸಾವು, 8 ಮಂದಿಗೆ ಗಾಯ

ಟ್ರಕ್‌ ಹಾಗೂ ಇತರ ಎರಡು ವಾಹನಗಳ ನಡುವೆ ಅಪಘಾತ: ಮೂವರ ಸಾವು, 8 ಮಂದಿಗೆ ಗಾಯ

0

ಮುಂಬೈ: ಟ್ರಕ್‌ ಹಾಗೂ ಇತರ ಎರಡು ವಾಹನಗಳ ನಡುವೆ ಮುಂಬೈ–ಪುಣೆ ಎಕ್ಸ್‌ಪ್ರೆಸ್ ವೇನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಇಂದು (ಶುಕ್ರವಾರ) ಬೆಳಿಗ್ಗೆ ಸಂಭವಿಸಿದೆ.

Join Our Whatsapp Group

ಭೊರ್‌ ಘಾಟ್‌ ಸಮೀಪ ಚಲಿಸುತ್ತಿದ್ದ ಟ್ರಕ್‌, ಬ್ರೇಕ್‌ ವೈಫಲ್ಯದಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಎರಡು ವಾಹನಗಳಿಗೆ ಗುದ್ದಿದೆ ಎಂದು ಎಎನ್‌ಐ ಟ್ವೀಟ್‌ ಮಾಡಿದೆ.

ಗಾಯಗೊಂಡವರನ್ನು ತಕ್ಷಣವೇ ಖೋಪೊಲಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿಂದಿನ ಲೇಖನಪ್ರಜ್ವಲ್ ಲೈಂಗಿಕ ಹಗರಣ: ಎಸ್‌ ಪಿಪಿ ಜಗದೀಶ್ ರಾಜೀನಾಮೆ
ಮುಂದಿನ ಲೇಖನಇವಿಎಂಗಳನ್ನು ಇಟ್ಟಿರುವ ಭದ್ರತಾ ಕೊಠಡಿಗಳಲ್ಲಿ ಹೆಚ್ಚುವರಿ ಸಿಸಿಟಿವಿ ಅಳವಡಿಕೆ: ಮದ್ರಾಸ್‌ ಹೈಕೋರ್ಟ್‌ ಗೆ ಸಿಇಒ