ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಾರು ಡಿವೈಡರ್ ಗೆ ಗುದ್ದಿ ಗಾಳಿಯಲ್ಲಿ ಮೂರು ಬಾರಿ ಪಲ್ಟಿ ಹೊಡೆದರೂ ಕೂಡ ಕಾರು ಚಾಲಕ ಸೀಟ್ ಬೆಲ್ಟ್ ಧರಿಸಿದ್ದರಿಂದ ಪ್ರಾಣ ಉಳಿದಿದೆ.
ಕಾರಿನ ಏರ್ ಬ್ಯಾಗ್ ಎಲ್ಲವೂ ಓಪನ್ ಆಗಿದ್ದು, ಇದರಿಂದ ಚಿಕ್ಕ ಗಾಯವಿಲ್ಲದೆ ಯವಕ ಬಚಾವ್ ಆಗಿದ್ದಾನೆ.
ಬೆಂಗಳೂರಿನಿಂದ ಮೈಸೂರಿಗೆ ಓರ್ವ ಯುವಕ ಕಾರಿನಲ್ಲಿ ಹೊರಟಿದ್ದನು. ದಾರಿ ಮಧ್ಯೆ ಕಾರಿನ ಟೈರ್ ಬ್ಲಾಸ್ಟ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು ನಿಯ ಡಿವೈಡರ್ ಗೆ ಗುದ್ದಿದೆ. ಹೆದ್ದಾರಿ ಡಿವೈಡರ್ ಕೂಡ ಪೀಸ್ ಪೀಸ್ ಆಗಿದ್ದು, ಸೂಚನಾ ಫಲಕ ಸರ್ವೀಸ್ ರಸ್ತೆಗೆ ಬಿದ್ದಿದೆ.
ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.