ಬೆಳ್ತಂಗಡಿ: ಮನೆಯಲ್ಲಿದ್ದ ಮಗು ಆಟವಾಡುತ್ತಾ ತೋಟದಲ್ಲಿದ್ದ ಕೆರೆ ಬಳಿ ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕನ್ನಾಜೆ ನಿವಾಸಿ ರೋಷನ್ ಡಿಸೋಜಾ ಮತ್ತು ಉಷಾ ಡಿಸೋಜಾ ದಂಪತಿಗಳ ಒಬ್ಬನೇ ಮಗ ರೇಯನ್ ಡಿಸೋಜಾ(1ವರ್ಷ 11 ತಿಂಗಳು) ಜ.22 ರಂದು ಬೆಳ್ತಂಗಡಿ ಮನೆಯ ತೋಟದಲ್ಲಿರುವ ಕೆರೆಗೆ ಬಿದ್ದು ಸಾವನ್ನಪ್ಪಿದೆ.
ತಕ್ಷಣ ಮನೆಯವರು ಮತ್ತು ಸ್ಥಳೀಯರ ಸಹಕಾರದಲ್ಲಿ ಲಾಯಿಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ ಮಗು ಸಾವನ್ನಪ್ಪಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತಂದೆ ರೋಷನ್ ದೂರು ನೀಡಿದ್ದು, ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.