ಮನೆ ಕಾನೂನು ನಕಲಿ ದಾಖಲೆ ಸೃಷ್ಟಿಸಿ ಪತ್ನಿ ಹೆಸರಿನಲ್ಲಿ ನಿವೇಶನ ನೋಂದಣಿ ಮಾಡಿದ ಆರೋಪ: ಬಿಡಿಎ ನಿವೃತ್ತ ಉಪಕಾರ್ಯದರ್ಶಿ...

ನಕಲಿ ದಾಖಲೆ ಸೃಷ್ಟಿಸಿ ಪತ್ನಿ ಹೆಸರಿನಲ್ಲಿ ನಿವೇಶನ ನೋಂದಣಿ ಮಾಡಿದ ಆರೋಪ: ಬಿಡಿಎ ನಿವೃತ್ತ ಉಪಕಾರ್ಯದರ್ಶಿ ವಿರುದ್ಧ ಪ್ರಕರಣ ದಾಖಲು

0

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಪತ್ನಿ ಹೆಸರಿನಲ್ಲಿ ನಿವೇಶನ ನೋಂದಣಿ ಮಾಡಿದ ಗಂಭೀರ ಆರೋಪದಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೃತ್ತ ಉಪಕಾರ್ಯದರ್ಶಿ ವಿರುದ್ಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಡಿಎ ವಿಚಕ್ಷಣ ದಳದ ಇನ್‌ ಸ್ಪೆಕ್ಟರ್ ಸಂಜೀವ ರಾಯಪ್ಪ ನೀಡಿದ ದೂರಿನ ಮೇರೆಗೆ ನಿವೃತ್ತ ಉಪಕಾರ್ಯದರ್ಶಿ ಬಿ.ಟಿ.ಶಂಕರ್ ರಾಜ್ ಅರಸ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅರಸ್ ವಿರುದ್ಧ ವಂಚನೆಯಡಿ ಎಫ್ ಐಆರ್ ದಾಖಲಾಗಿದೆ.

1993-94ರ ಅವಧಿಯಲ್ಲಿ ಬಿಡಿಎಯಲ್ಲಿ ಕಾರ್ಯದರ್ಶಿಯಾಗಿದ್ದ ಶಂಕರ್ ರಾಜ್, ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿದ್ದ ಮೂಲೆ ನಿವೇಶನವನ್ನು ಅಕ್ರಮವಾಗಿ ಪತ್ನಿಯ ಹೆಸರಿಗೆ ನೋಂದಣಿ‌ ಮಾಡಿದ್ದರು. ಸಾರ್ವಜನಿಕರಿಗೆ ಹರಾಜು ಹಾಕಬೇಕಿದ್ದ ಈ ನಿವೇಶನವನ್ನು ಒಳಸಂಚು ರೂಪಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ರಿಜಿಸ್ಟರ್ ಮಾಡಿಸಿದ್ದರು.‌ ನಕಲಿ ದಾಖಲಾತಿ ಇಟ್ಟುಕೊಂಡು, ಯಾವುದೇ ಹಣ ಪಾವತಿಸದೇ ಕಚೇರಿಯಲ್ಲಿರುವ ಸೀಲ್​ ಬಳಸಿ ವಂಚಿಸಿದ್ದರು. ಇದಾಗಿ 30 ವರ್ಷಗಳ ಬಳಿಕ ಇದೀಗ ವಂಚನೆ ಬೆಳಕಿಗೆ ಬಂದಿದೆ.