ಮನೆ ಆರೋಗ್ಯ ಕೊರೊನಾ ಹೆಚ್ಚಳ: ಏಪ್ರಿಲ್ 10, 11ರಂದು ಆಸ್ಪತ್ರೆಗಳಲ್ಲಿ ಸಿದ್ದತಾ ಅಭಿಯಾನ

ಕೊರೊನಾ ಹೆಚ್ಚಳ: ಏಪ್ರಿಲ್ 10, 11ರಂದು ಆಸ್ಪತ್ರೆಗಳಲ್ಲಿ ಸಿದ್ದತಾ ಅಭಿಯಾನ

0

ನವದೆಹಲಿ: ಕೋವಿಡ್‌ 19 ಮತ್ತು ಇನ್‌’ಪ್ಲೂಯೆಂಜಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಏಪ್ರಿಲ್‌ 10 ಮತ್ತು 11ರಂದು ದೇಶದಾದ್ಯಂತ ಆಸ್ಪತ್ರೆಗಳಲ್ಲಿ ಸಿದ್ಧತಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.

ಎಲ್ಲಾ ಜಿಲ್ಲೆಗಳ ಖಾಸಗಿ ಮತ್ತು ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್‌) ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ, ಆಮ್ಲಜನಕ ಮತ್ತು ಔಷಧಿಗಳ ದಾಸ್ತಾನು ಸಮರ್ಪಕವಾಗಿವೆಯೇ ಎಂಬುದನ್ನು ಪರಿಶೀಲಿಸುವುದು ಈ ಅಭಿಯಾನದ ಉದ್ದೇಶ ಎಂದೂ ಹೇಳಿದೆ.

ಮಾರ್ಚ್‌ 27ರಂದು ವರ್ಚುವಲ್‌ ಸಭೆಯ ಮೂಲಕ ಅಭಿಯಾನದ ಮಾಹಿತಿಯನ್ನು ರಾಜ್ಯಗಳಿಗೆ ನೀಡಲಾಗುವುದು ಎಂದೂ ತಿಳಿಸಿದೆ.

ಬೂಸ್ಟರ್‌ ಡೋಸ್ ಪಡೆದುಕೊಳ್ಳಿ:

ದೆಹಲಿಯಲ್ಲಿ ಈಚೆಗೆ ಕೋವಿಡ್‌ ಪ್ರಕರಣಗಳು ಹೆಚ್ಚಾಗಲು ಎಕ್ಸ್‌’ಬಿಬಿ.1.16 ತಳಿ ಕಾರಣ ಎಂದಿರುವ ತಜ್ಞರು, ಜನರು ಭಯಪಡುವ ಅಗತ್ಯವಿಲ್ಲ, ಕೋವಿಡ್ ಲಸಿಕೆಯ ಬೂಸ್ಟರ್‌ ಡೋಸ್‌ ಇದುವರೆಗೆ ಪಡೆದುಕೊಳ್ಳದವರು ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಹಿಂದಿನ ಲೇಖನಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ತಾತ್ಕಾಲಿಕ ವಿರಾಮ: ಬಸವ ಜಯಮೃತ್ಯುಂಜಯ ಶ್ರೀ
ಮುಂದಿನ ಲೇಖನಹರಿ ನಿನ್ನೊಲುಮೆ ಆಗುವ ತನಕ ಅರಿತು