ಮನೆ Uncategorized ಕೃತಕ ಅಭಾವ ಸೃಷ್ಟಿಸಿದರೆ ಮುಲಾಜಿಲ್ಲದೇ ಕ್ರಮ: ಬಿ.ಸಿ.ಪಾಟೀಲ್

ಕೃತಕ ಅಭಾವ ಸೃಷ್ಟಿಸಿದರೆ ಮುಲಾಜಿಲ್ಲದೇ ಕ್ರಮ: ಬಿ.ಸಿ.ಪಾಟೀಲ್

0

ಬೆಂಗಳೂರು(Bengaluru): ಕೆಲವರು ಬೇಕಂತಲೇ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಕೃತಕವಾಗಿ ರಸಗೊಬ್ಬ, ಬಿತ್ತನೆಬೀಜ ಅಭಾವ ಸೃಷ್ಟಿಸುತ್ತಿದ್ದಾರೆ. ಹೀಗೆ ಕೃತಕವಾಗಿ ಯಾರಾದರೂ ರಸಗೊಬ್ಬರ,ಬಿತ್ತನೆ ಬೀಜ ಅಭಾವ ಸೃಷ್ಟಿಸಿದರೆ ಅಂತವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಸಜಾಲಕ್ಕೆ ರಸಗೊಬ್ಬರ ಬಿತ್ತನೆಬೀಜ ಕೊರತೆಯಾಗದಂತೆ ಹಂತಹಂತವಾಗಿ ನೋಡಿಕೊಳ್ಳಲಾಗುತ್ತಿದೆ.ಯಾವುದೇ ಕಾರಣಕ್ಕೂ ರೈತನಿಗೆ ತೊಂದರೆಯಾಗಲು ಬಿಡುವುದಿಲ್ಲ.

2022-23ನೇ ಸಾಲಿನ ಮುಂಗಾರು ಹಂಗಾಮಿನ ರಸಗೊಬ್ಬರ ಸರಬರಾಜು ವಿವರ – 2022-23ರ ಸಾಲಿನ ಮುಂಗಾರು ಹಂಗಾಮಿಗೆ ( ಏಪ್ರಿಲ್ -2022 ರಿಂದ ಸೆಪ್ಟೆಂಬರ್ 2022 ರವರೆಗೆ ) 26.76 ಲಕ್ಷ ಮೆ.ಟನ್ ( ಯೂರಿಯಾ -10.50 ಲಕ್ಷ ಮೆ.ಟನ್ , ಡಿ.ಎ.ಪಿ – 4.00 ಲಕ್ಷ ಮೆ.ಟನ್ , ಎಂ ಒ ಪಿ – 2.00 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್- 10.26 ಲಕ್ಷ ಮೆ.ಟನ್ ) ಪ್ರಮಾಣದ ವಿವಿಧ ಗ್ರೇಡ್ ಗಳ ರಸಗೊಬ್ಬರದ ಬೇಡಿಕೆಯಿರುತ್ತದೆ .  ಏಪ್ರಿಲ್ 2022 ರ ಮಾಹೆಯಿಂದ ಮೇ ಮಾಹೆಯವರೆಗೆ ಒಟ್ಟು 7.61 ಲಕ್ಷ ಮೆ.ಟನ್ ( ಯೂರಿಯಾ – 2.23 ಲಕ್ಷ ಮೆ.ಟನ್ , ಡಿ.ಎ.ಪಿ – 1.56 ಲಕ್ಷ ಮೆ.ಟನ್ , ಎಂ ಒ ಪಿ – 0.64 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್- 3.18 ಲಕ್ಷ ಮೆ.ಟನ್ ) ಬೇಡಿಕೆಯಿರುತ್ತದೆ . ದಿನಾಂಕ 01.04.2022 ರಂತೆ ಆರಂಭಿಕ ಶಿಲು ಒಟ್ಟು 5.94 ಲಕ್ಷ ಮೆ.ಟನ್ ( ಯೂರಿಯಾ -3,12 ಲಕ್ಷ ಮೆ.ಟನ್ , ಡಿ.ಎ.ಪಿ – 0.58 ಲಕ್ಷ ಮೆ.ಟನ್ , ಎಂ ಒ ಪಿ – 0.19 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್- 2.05 ಲಕ್ಷ ಮೆ.ಟನ್ ) ಇರುತ್ತದೆ . ದಿನಾಂಕ 09.05.2022 ರ ಅಂತ್ಯಕ್ಕೆ 3.91 ಮೆ.ಟನ್ ( ಯೂರಿಯಾ -1.74 ಲಕ್ಷ ಮೆ.ಟನ್ , ಡಿ.ಎ.ಪಿ – 0.88 ಲಕ್ಷ ಮೆ.ಟನ್ ಎಂ . ಒ . ಪಿ – 0.10 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್- 1.19 ಮ.ಟನ್ ) ಪಮಾಣದ ರಸಗೊಬ್ಬರ ಸರಬರಾಜಾಗಿರುತ್ತದೆ . ಒಟ್ಟು 9.85 ಲಕ್ಷ ಮೆ.ಟನ್ ದಾಸ್ತಾನಿನಲ್ಲಿ 2.70 ಲಕ್ಷ ಮೆ.ಟನ್ ಲಕ್ಷ ಮೆ.ಟನ್ ಪುಮಾಣದ ರಸಗೊಬ್ಬರವು ಮಾರಾಟವಾಗಿರುತ್ತದೆ . ಪುಸ್ತುತ ಒಟ್ಟು 7.15 ಲಕ್ಷ ಮೆ.ಟನ್ ( ಯೂರಿಯಾ -3.45 ಲಕ್ಷ ಮೆ.ಟನ್ , ಡಿ.ಎ.ಪಿ – 1.02 ಲಕ್ಷ ಮೆ.ಟನ್ , ಎಂ ಒ ಪಿ – 0.20 ಲಕ್ಷ ಮ.ಟನ್ ಮತ್ತು ಕಾಂಪ್ಲೆಕ್ಸ್- 2.48 ಲಕ್ಷ ಮೆ.ಟನ್ ) ಪುಮಾಣದ ರಸಗೊಬ್ಬರವು ಖಾಸಗಿ ಮಾರಾಟಗಾರರು ಮತ್ತು ಸಹಕಾರ ಸಂಘಗಳಲ್ಲಿ ( ಒಟ್ಟು , 0.83 ಲಕ್ಷ ಮೆ.ಟನ್ ಕಾಪು ದಾಸ್ತಾನು ಒಳಗೊಂಡಿದದಾಸ್ತಾನಿದ್ದು , ರಸಗೊಬ್ಬರದ ಯಾವುದೇ ಕೊರತ ಇರುವುದಿಲ್ಲ.

ಬಿತ್ತನೆ ಬೀಜ ವಿತರಣೆ :

ರಾಜ್ಯ ಸರ್ಕಾರದ ರಿಯಾಯಿತಿ ಯೋಜನೆಯಡಿ ಭತ್ತ , ರಾಗಿ , ಜೋಳ , ಮೆಕ್ಕೆಜೋಳ , ಉದ್ದು , ಹೆಸರು , ಕಡಲೆ , ಅಲಸಂದೆ , ನೆಲಗಡಲೆ , ಸೋಯಾವರೆ , ಸೂರ್ಯಕಾಂತಿ , ಗೋದಿ , ಕುಸುಬೆ ಮತ್ತು ನವಣೆ ಬಿತ್ತನೆ ಬೀಜಗಳನ್ನು ರಾಜ್ಯದ ಎಲ್ಲಾ ವರ್ಗದ ರೈತರಿಗೆ ( ಸಾಮಾನ್ಯ ರೈತರಿಗೆ ಶೇ 50 ರ ವರೆಗೆ ಹಾಗು ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದ ವರಿಗೆ ಶೇ .75 ರ ವರೆಗೆ ) ಒಟ್ಟಾರೆ ಗರಿಷ್ಟ 2.00 ಹೆಕ್ಟೇರ್‌ ಅಥವಾ ಅವರ ವಾಸ್ತವಿಕ ಹಿಡುವಳಿ  ಯಾವುದಿದೆಯೋ  ಆ ವಿಸ್ತೀರ್ಣದ ಮಿತಿಯೊಳಗೆ ರೈತರಿಗೆ ಸಕಾಲದಲ್ಲಿ ಹೋಬಳಿ ಮಟ್ಟದಲ್ಲಿಯೇ ಉತ್ತಮ ಬಿತ್ತನೆ ಬೀಜಗಳು ಲಭ್ಯವಾಗುವಂತೆ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳು ಗುರುತಿಸಿದ ಹೆಚ್ಚುವರಿ ಮಾರಾಟ ಕೇಂದ್ರಗಳು ಹಾಗೂ ಗ್ರಾಮ ಮಟ್ಟದಲ್ಲಿಯೇ ಲಭ್ಯವಾಗುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದರು>

ಸುದ್ದಿಗೋಷ್ಠಿಯಲ್ಲಿ  ರಾಜ್ಯ ಬಿಜೆಪಿ ಪ್ರಧಾನಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ರಾಜ್ಯ  ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಉಪಸ್ಥಿತರಿದ್ದರು.

ಹಿಂದಿನ ಲೇಖನಹೊಸ ಆಲೋಚನೆ  ಇದ್ದಾಗ ಮಾತ್ರ ಬದುಕಿನಲ್ಲಿ ಚಲನಶೀಲತೆ: ಪ್ರೊ.ಆರ್.ಶಿವಪ್ಪ
ಮುಂದಿನ ಲೇಖನಸೋಲಿನಿಂದ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ: ಸಿ.ಟಿ ರವಿ