ಮನೆ ರಾಜಕೀಯ ಸೋಲಿನಿಂದ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ: ಸಿ.ಟಿ ರವಿ

ಸೋಲಿನಿಂದ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ: ಸಿ.ಟಿ ರವಿ

0

ಬೆಂಗಳೂರು(Bengaluru): ಕಾಂಗ್ರೆಸ್ ನಾಯಕರು ಸೋಲಿನಿಂದಾಗಿ ಮಾನಸಿಕ ಸ್ಥಿತಿ ಕಳ್ಕೊಂಡಿದ್ದಾರೆ ಎಂದು ಸಚಿವ ಸಿ ಟಿ ರವಿ ಹೇಳಿದ್ದಾರೆ.

ಬಿಜೆಪಿ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದ್ದ ಬಿ.ಕೆ ಹರಿಪ್ರಸಾದ್  ವಿರುದ್ಧ ಹರಿಹಾಯ್ದಿರುವ ಅವರು,  ಕಾಂಗ್ರೆಸ್ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡೋದು ಈಗಿನ ಪ್ರಶ್ನೆ, ಆಜಾನ್  ಇರಲಿ, ಭಜನೆ ಇರಲಿ,  ಎಲ್ಲರೂ ಸುಪ್ರೀಂ ಕೋರ್ಟ್ ಆದೇಶ‌ ಪಾಲಿಸಲಿ, ಇದರ ಬಗ್ಗೆ ಕಾಂಗ್ರೆಸ್ ನಿಲುವೇನು? ಕೋರ್ಟ್ ತೀರ್ಪು ಜಾರಿ ಮಾಡ್ಬೇಕಾ? ಬೇಡವಾ? ಮಾಡಬಾರದು ಅಂದ್ರೆ ನೀವು ಸಂವಿಧಾನ ವಿರೋಧಿ ಅಂತೀರಾ ಕೋರ್ಟ್ ತೀರ್ಪು ಪಾಲಿಸಿ ಅಂದ್ರೆ ಭಯೋತ್ಪಾದಕರು ಅಂತೀರಾ? ಎಂದು ಪ್ರಶ್ನಿಸಿದ್ರು. ಇದು ಕಾಂಗ್ರೆಸ್​ನ ಹತಾಶೆಯ ಸ್ಥಿತಿ ತೋರಿಸ್ತಿದೆ ಎಂದು ಹೇಳಿದ್ದಾರೆ. 

ಕೋರ್ಟ್ ಆದೇಶ ಇರೋದು ರಾತ್ರಿ  10 ರಿಂದ ಬೆಳಗ್ಗೆ 6 ರವರೆಗೆ ಮೈಕ್ ಹಾಕಬಾರದು ಅನ್ನೋದು, ವಿಶೇಷ ಸಂದರ್ಭ ಇದ್ರೆ ಅನುಮತಿ ಪಡೆದುಕೊಳ್ಳಲಿ, ಇದು ಪಾಲನೆ ಆಗಬೇಕಿದೆ ಎಂದರು. ಇನ್ನು ಸತತ ಸೋಲಿನಿಂದ ಕಾಂಗ್ರೆಸ್​ ಕಂಗೆಟ್ಟಿದೆ. ಹೀಗಾಗಿ ಬಿ.ಕೆ ಹರಿಪ್ರಸಾದ್ ಅಂಥವರಿಂದ ಇಂತಹ ಹೇಳಿಕೆ ಬರುತ್ತೆ ಎಂದು ಹೇಳಿದರು.

ಹಿಂದೂ ಕಾರ್ಯಕರ್ತರ ಹತ್ಯೆಗೆ ಸ್ಕೆಚ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಅವ್ರು, ಕೇರಳ ತಮಿಳುನಾಡಿನಲ್ಲಿ ಇದನ್ನ ವ್ಯವಸ್ಥೆ ರೀತಿಯಲ್ಲಿ ಮಾಡಿಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಇದು ಕರ್ನಾಟಕದಲ್ಲಿ ಜಾಸ್ತಿಯಾಗಿತ್ತು. ಕಾಂಗ್ರೆಸ್ ನೀತಿಯೇ ಮತ ಬ್ಯಾಂಕ್ ಆಧಾರಿತ ರಾಜಕೀಯ ನೀತಿ, ಸಿದ್ದರಾಮಯ್ಯ ಕಾಲದಲ್ಲಿ 34 ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು. ಹೀಗೆ ಟಾರ್ಗೆಟ್ ಮಾಡ್ತಿರೋರ ಬಗ್ಗೆ ಎಚ್ಚರವಹಿಸಬೇಕು. ಈ ಪ್ರಕರಣಗಳಲ್ಲಿ ಯಾರೇ ಇದ್ರು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೇ ಕಠಿಣ ಕ್ರಮ‌ಕೈಗೊಳ್ಳಬೇಕು ಎಂದರು.

ಹಿಂದಿನ ಲೇಖನಕೃತಕ ಅಭಾವ ಸೃಷ್ಟಿಸಿದರೆ ಮುಲಾಜಿಲ್ಲದೇ ಕ್ರಮ: ಬಿ.ಸಿ.ಪಾಟೀಲ್
ಮುಂದಿನ ಲೇಖನಮುತಾಲಿಕ್ ಅಂತವರನ್ನು ಒದ್ದು ಒಳಗೆ ಹಾಕಿ: ಹೆಚ್ ಡಿ ಕುಮಾರಸ್ವಾಮಿ