ಮನೆ ಮನರಂಜನೆ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಗೆ ಜನ್ಮದಿನದ ಸಂಭ್ರಮ

ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಗೆ ಜನ್ಮದಿನದ ಸಂಭ್ರಮ

0

ತೆಲುಗು ಸೂಪರ್ ಸ್ಟಾರ್, ಟಾಲಿವುಡ್ ಸ್ಟೈಲಿಶ್ ಸ್ಟಾರ್, ದಕ್ಷಿಣ ಭಾರತದ ಖ್ಯಾತ ನಟರಲ್ಲಿ ಒಬ್ಬರಾದ ಅಲ್ಲು ಅರ್ಜುನ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅಲ್ಲು ಅರ್ಜುನ್ ಇಂದು 40ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಈಗಷ್ಟೇ ಪುಷ್ಪ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ಅಲ್ಲು ಅರ್ಜುನ್ಗೆ ಕುಟುಂಬಸ್ಥರು, ಸ್ನೇಹಿತರು, ತೆಲುಗು ಚಿತ್ರರಂಗದ ಗಣ್ಯರು, ವಿವಿಧ ಚಿತ್ರರಂಗದ ಸ್ನೇಹಿತರು ಜೊತೆಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

1982ರಲ್ಲಿ ಚೆನ್ನೈನಲ್ಲಿ ಜನಿಸಿದ ಈ ನಟ, ಇಂದು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರು. ತಮ್ಮ ಕುಟುಂಬಸ್ಥರು, ಪತ್ನಿ, ಮಕ್ಕಳೊಂದಿಗೆ ಅಲ್ಲು ಅರ್ಜುನ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಅಲ್ಲು ಅರ್ಜುನ್ ಹೀರೋ ಆಗಿದ್ದು ಗಂಗೋತ್ರಿ ಸಿನಿಮಾದ ಮೂಲಕ. ಆದರೆ ಅವರು ಹೆಸರು ಗಳಿಸಿದ್ದು 2004ರಲ್ಲಿ ಬಂದ ಆರ್ಯ ಸಿನಿಮಾ ಮೂಲಕ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿತು. ಈ ಮೂಲಕ ಅಲ್ಲು ಅರ್ಜುನ್ ಯುವ ಜನರ ನೆಚ್ಚಿನ ಸ್ಟಾರ್ ಆದರು.

2007ರಲ್ಲಿ ಪುರಿ ಜಗನ್ನಾಥ್ ನಿರ್ದೇಶಿಸಿದ ಇವರ ಐದನೇ ಚಲನಚಿತ್ರವಾದ ದೇಸಮುದುರು ಬಾಕ್ಸ್ ಆಫೀಸ್ ಹಿಟ್ ಆಯಿತು. ಜೊತೆಗೆ ಟಾಲಿವುಡ್ನಲ್ಲಿ ವರ್ಷದ ಮೊಲದ ಹಿಟ್ ಚಲನಚಿತ್ರವಾಯಿತು. ಚಲನಚಿತ್ರವು ಬಿಡುಗಡೆಗೊಂಡ ಮೊದಲ ವಾರದೊಳಗೆ 12.58 ಕೋಟಿ ರೂಪಾಯಿಗಳ ಗಳಿಕೆಯನ್ನು ಕಂಡಿತು ಮತ್ತು ಅಲ್ಲು ಅರ್ಜುನ್ ಅವರು ಸಿಕ್ಸ್ ಪ್ಯಾಕ್ ಪ್ರದರ್ಶಿಸಿದ ಮೊದಲ ಟಾಲಿವುಡ್ ನಟರಾದರು.

ಅಲ್ಲು ಅರ್ಜುನ್ ಅವರು ಫೆಬ್ರವರಿ 2011 ರಲ್ಲಿ ತಮ್ಮ ಪ್ರಿಯತಮೆ ಹೈದ್ರಾಬಾದ್ನ ಸ್ನೇಹಾರೆಡ್ಡಿ ಅವರನ್ನು ಮದುವೆಯಾಗುವುದಾಗಿ ಹೇಳಿದ್ರು. 2011 ರ ಮಾರ್ಚ್ 26 ರಂದು ಸ್ನೇಹಾ ರೆಡ್ಡಿ ಹಾಗೂ ಅಲ್ಲು ಅರ್ಜುನ್ ದಂಪತಿಯಾಗಿ, ಹೊಸ ಬಾಳು ಪ್ರವೇಶಿಸಿದ್ರು. ಅವರಿಗೀಗ ಒಬ್ಬ ಮಗಳು ಹಾಗೂ ಒಬ್ಬ ಮಗ ಇದ್ದಾರೆ. ಆಗಾಗ ಫ್ಯಾಮಿಲಿ ಜೊತೆ ಟ್ರಿಪ್ ಹೋಗುವ ಅಲ್ಲು ಅರ್ಜುನ್. ಹೆಂಡತಿ, ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಸಮಯ ಕಳೆಯುತ್ತಾರೆ.

ಡಿಸೆಂಬರ್ 17, 2021ರಲ್ಲಿ ರಿಲೀಸ್ ಆದ ‘ಪುಷ್ಪ: ದಿ ರೈಸ್’ ಸಿನಿಮಾ ಅಲ್ಲು ಅರ್ಜುನ್ ಸಿನಿ ಕೆರಿಯರ್ಗೆ ಮತ್ತೊಂದು ಬ್ರೇಕ್ ಕೊಟ್ಟಿತು. ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ವಿಶಿಷ್ಟ ಶೈಲಿಯು ಅವರ ಅಭಿಮಾನಿಗಳ ಹೃದಯವನ್ನು ಗೆದ್ದಿತು ಮತ್ತು ಅವರ ಪುಷ್ಪಾ ಪಾತ್ರವು ಫೇಮಸ್ ಆಯಿತು. ಹಾಡಿನಲ್ಲಿ ಅವರ ಯುನಿಕ್ ಸ್ಟೈಲ್ ವೈರಲ್ ಆಗಿದ್ದು, ಅಭಿಮಾನಿಗಳು ಅದನ್ನು ಮರುಸೃಷ್ಟಿಸಿ ತಮ್ಮದೇ ಆದ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುತ್ತಿದ್ದಾರೆ.

ಈಗ ಅಲ್ಲು ಅರ್ಜುನ್​ ಅವರು ‘ಪುಷ್ಪ 2’ ಸಿನಿಮಾದ ಕೆಲಸಗಳತ್ತ ಗಮನ ಹರಿಸಿದ್ದಾರೆ. ಮೊದಲ ಪಾರ್ಟ್​ ಸೂಪರ್​ ಹಿಟ್​ ಆಗಿರುವುದರಿಂದ 2ನೇ ಪಾರ್ಟ್​ ಅನ್ನು ಇನ್ನಷ್ಟು ಚೆನ್ನಾಗಿ ಕಟ್ಟಿಕೊಡುವ ಹೊಣೆ ಈ ಚಿತ್ರತಂಡದ ಮೇಲಿದೆ. ಅದು ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲೇ ರಿಲೀಸ್​ ಆಗಲಿದೆ. ಅಲ್ಲು ಅರ್ಜುನ್​ ಅವರಿಗೆ ದೇಶವ್ಯಾಪಿ ಡಿಮ್ಯಾಂಡ್​ ಇರುವುದರಿಂದ ಸಹಜವಾಗಿಯೇ ನಿರ್ಮಾಪಕರು ಅದನ್ನು ಎನ್​ಕ್ಯಾಶ್​ ಮಾಡಿಕೊಳ್ಳಲು ಬಯಸುತ್ತಾರೆ. ಹಾಗಾಗಿ ಇನ್ಮುಂದೆ ಅವರು ನಟಿಸುವ ಎಲ್ಲ ಸಿನಿಮಾಗಳು ಕೂಡ ಪ್ಯಾನ್​ ಇಂಡಿಯಾ ಚಿತ್ರಗಳೇ ಆಗಿರಲಿವೆ ಎಂಬುದು ಖಚಿತ.

ಪುಷ್ಪ’ ಸಿನಿಮಾಗಾಗಿ ಅಲ್ಲು ಅರ್ಜುನ್​ ಅವರು ಬರೋಬ್ಬರಿ 35 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು ಎಂದು ಹೇಳಲಾಗಿದೆ. ಆ ಚಿತ್ರ ಭರ್ಜರಿ ಗೆಲುವು ಕಂಡಿದ್ದರಿಂದ ಈಗ ಅವರು ಸಂಭಾವನೆ ಏರಿಸಿಕೊಂಡಿದ್ದಾರೆ. ಮುಂಬರುವ ಸಿನಿಮಾಗಳಿಗೆ ಅವರು 50 ಕೋಟಿ ರೂಪಾಯಿ ಡಿಮ್ಯಾಂಡ್​ ಮಾಡುತ್ತಿದ್ದಾರೆ ಎಂದು ಕೆಲವೆಡೆ ವರದಿ ಆಗಿದೆ. ಅಲ್ಲು ಅರ್ಜುನ್​ ಈ ಪರಿ ದುಬಾರಿ ಆಗಿದ್ದರೂ ಕೂಡ ಅವರ ಕಾಲ್​ಶೀಟ್​ ಪಡೆಯಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ..

ಹಿಂದಿನ ಲೇಖನ‘ಶಕ್ತಿಧಾಮ’ಕ್ಕೆ 5 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಮುಂದಿನ ಲೇಖನಯಥಾಸ್ಥಿತಿ ಕಾಯ್ದುಕೊಂಡ ಆರ್ ಬಿ ಐ ರೆಪೋ ದರ