ನಟ ಕಮಲ್ ಹಾಸನ್ ಅವರ 233ನೇ ಸಿನಿಮಾ ಅನೌನ್ಸ್ ಆಗಿದ್ದು, ಒಂದು ಪ್ರೋಮೋ KH233 ಬಿಡುಗಡೆ ಮಾಡಲಾಗಿದೆ.
ಖ್ಯಾತ ನಿರ್ದೇಶಕ ಎಚ್. ವಿನೋದ್ ಜೊತೆ ಕಮಲ್ ಹಾಸನ್ ಅವರು ಕೈ ಜೋಡಿಸಿದ್ದಾರೆ. ಕಮಲ್ ಹಾಸನ್ ಅವರು ಸದ್ಯ ನಿರ್ದೇಶಕ ಶಂಕರ್ ಜೊತೆ ‘ಇಂಡಿಯನ್ 2’ ಸಿನಿಮಾ ಮಾಡುತ್ತಿದ್ದಾರೆ. ಯಾಕೆಂದರೆ, ‘ಇಂಡಿಯನ್ 2’ ಬಳಿಕ ಎಚ್. ವಿನೋದ್ ಜೊತೆಗಿನ ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸುವುದು ಖಚಿತವಾಗಿದೆ.
ಕಮಲ್ ಹಾಸನ್ ಅವರು 233ನೇ ಸಿನಿಮಾದ ಪೋಸ್ಟರ್ನಲ್ಲಿ ‘Rise to rule’ ಎಂಬ ಬರಹ ಇದೆ. ಜನನಾಯಕನ ರೀತಿ ಕಮಲ್ ಹಾಸನ್ ಪೋಸ್ ನೀಡಿದ್ದಾರೆ. ಇದರಲ್ಲಿ ಸಂಪೂರ್ಣ ರಾಜಕೀಯದ ಕುರಿತ ಕಹಾನಿ ಇರಲಿದೆ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನಷ್ಟೇ ಬಹಿರಂಗ ಆಗಬೇಕಿದೆ. ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಲಿದ್ದಾರೆ.