ಮನೆ ರಾಜಕೀಯ ರಾಜ್ಯದಲ್ಲಿನ ಟಫ್ ರೂಲ್ಸ್ ಸಿಎಂ ತೀರ್ಮಾನವಲ್ಲ: ಸಚಿವ ಎಸ್ ಟಿ ಸೋಮಶೇಖರ್

ರಾಜ್ಯದಲ್ಲಿನ ಟಫ್ ರೂಲ್ಸ್ ಸಿಎಂ ತೀರ್ಮಾನವಲ್ಲ: ಸಚಿವ ಎಸ್ ಟಿ ಸೋಮಶೇಖರ್

0

 ಮೈಸೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿರುವ ಕಾರಣದಿಂದಾಗಿ ಸೋಂಕನ್ನು ನಿಯಂತ್ರಣಕ್ಕೆ ತರಲು ರಾಜ್ಯ ಸರ್ಕಾರ ವೀಕೆಂಡ್‌ ಕರ್ಪ್ಯೂ, ನೈಟ್‌ ಕರ್ಪ್ಯೂಗಳನ್ನು ಜಾರಿಗೊಳಿಸಿದೆ. ಆದರೆ ಈ ಎಲ್ಲಾ ಕಠಿಣ ನಿಯಮಗಳು ಜಾರಿ ಮಾಡಿರುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರ ತೀರ್ಮಾನವಲ್ಲ ಎಂದು ಸಚಿವ ಎಸ್‌ಟಿ ಸೋಮಶೇಖರ್‌ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ತಜ್ಞರ ಸಲಹೆ ಮೇರೆಗೆ ನಿರ್ಧಾರವನ್ನು ತೆಗೆದುಕೊಂಡಿರುವುದು. ಇನ್ನು, ಕೊರೊನಾ ಸೋಂಕು ಹೆಚ್ಚಳ ಒಂದು ಕಡೆಗೆ ಆದರೇ ಸರ್ಕಾರದ ಕಠಿಣ ನಿಯಮಗಳಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಬೊಮ್ಮಾಯಿ ಅವರಿಗೂ ಜನಾಭಿಪ್ರಾಯದ ಬಗ್ಗೆ ಮಾಹಿತಿಯಿದೆ. ಈ ಎಲ್ಲ ಅಂಶಗಳ ಕುರಿತಾಗಿ ನಾಳೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯದ ಪ್ರಸ್ತುತ ಸ್ಥಿತಿಗತಿಗಳ ಕುರಿತು ಎಲ್ಲರ ಅಭಿಪ್ರಾಯದ ಬಳಿಕ ಮುಂದಿನ ತೀರ್ಮಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಕೊರೊನಾ ಸೋಂಕಿನ ಮೂರನೇ ಅಲೆ ಅಪಾಯವಲ್ಲದಿದ್ದರೂ ವಾರಕ್ಕೆ ಒಮ್ಮೆಯಾದರೂ ಕೆಲವು ಮುಂಜಾಗ್ರತಾ ಕ್ರಮಕ್ಕೆ ತಜ್ಞರು ಸೂಚನೆಯನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.

ಹಿಂದಿನ ಲೇಖನಮೈಸೂರು: ಫೆಬ್ರವರಿಯಲ್ಲಿ 4 ಸಾವಿರ ಗಡಿ ದಾಟಲಿರುವ ಕೊರೊನಾ
ಮುಂದಿನ ಲೇಖನಉತ್ತರ ಪ್ರದೇಶ ಚುನಾವಣೆ: ಕಾಂಗ್ರೆಸ್ ನಿಂದ ಎರಡನೇ ಪಟ್ಟಿ ಬಿಡುಗಡೆ