ಮನೆ ಮನರಂಜನೆ ನಟಿ ಪ್ರಿಯಾಂಕಾ ಉಪೇಂದ್ರ ಜನ್ಮದಿನ: ಕೈಮರ ಚಿತ್ರತಂಡದಿಂದ ಸ್ಪೆಷಲ್ ಪೋಸ್ಟರ್ ಬಿಡುಗಡೆ

ನಟಿ ಪ್ರಿಯಾಂಕಾ ಉಪೇಂದ್ರ ಜನ್ಮದಿನ: ಕೈಮರ ಚಿತ್ರತಂಡದಿಂದ ಸ್ಪೆಷಲ್ ಪೋಸ್ಟರ್ ಬಿಡುಗಡೆ

0

ಕನ್ನಡ ಚಿತ್ರರಂಗದ ನಟಿ ಪ್ರಿಯಾಂಕಾ ಉಪೇಂದ್ರ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಪ್ರಿಯಾಂಕಾ ಅವರಿಗೆ ಸ್ನೇಹಿತರು, ಅಭಿಮಾನಿಗಳು, ಆತ್ಮೀಯರು ಹಾಗೂ ಸ್ಯಾಂಡಲ್​​ವುಡ್​​ ಗಣ್ಯರು ಶುಭ ಕೋರಿದ್ದಾರೆ.

ಕೈಮರ ಚಿತ್ರತಂಡ ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಪ್ರಿಯಾಂಕಾರಿಗೆ ವಿಶೇಷವಾಗಿ ಶುಭಕೋರಿದೆ.

ಖ್ಯಾತ ನಿರ್ದೇಶಕ ಪಿ.ವಾಸು ಅವರ ಸಹೋದರನ ಪುತ್ರ ಗೌತಮ್ ವಿಮಲ್ ನಿರ್ದೇಶನದ “ಕೈಮರ” ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಿರುಸಿನಿಂದ ಸಾಗಿದೆ.

ವಿ.ಮತ್ತಿಯಳಗನ್ ನಿರ್ಮಾಣದ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಪ್ರಿಯಾಂಕಾ ಅಲ್ಲದೇ ಪ್ರಿಯಾಮಣಿ, ಛಾಯಾಸಿಂಗ್, ಮತ್ತಿಯಳಗನ್ ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರದ ಕಥೆಯನ್ನು ಪಿ. ವಿಮಲ್ ಬರೆದಿದ್ದು, ಗುರುಕಿರಣ್ ಸಂಗೀತ ನಿರ್ದೇಶನ, ಮಣಿಕಂಠನ್ ಛಾಯಾಗ್ರಹಣ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನವಿದೆ.

ಹಿಂದಿನ ಲೇಖನತುಮಕೂರು: ಪೊಲೀಸ್ ಠಾಣೆಯಲ್ಲಿ ವ್ಯಕ್ತಿಗೆ ನಿಂದಿಸಿ, ಹಲ್ಲೆ- ಹೆಡ್’ಕಾನ್ಸ್’ಟೇಬಲ್ ಅಮಾನತು
ಮುಂದಿನ ಲೇಖನಮೈಸೂರಿಗೆ ಆಗಮಿಸಿದ ವಂದೇ ಭಾರತ್ ಎಕ್ಸ್​’ಪ್ರೆಸ್: ಬಿಜೆಪಿ ಕಾರ್ಯಕರ್ತರಿಂದ ಪ್ರಯಾಣಿಕರಿಗೆ ಸ್ವಾಗತ