ಮನೆ ಅಪರಾಧ ತುಮಕೂರು: ಪೊಲೀಸ್ ಠಾಣೆಯಲ್ಲಿ ವ್ಯಕ್ತಿಗೆ ನಿಂದಿಸಿ, ಹಲ್ಲೆ- ಹೆಡ್’ಕಾನ್ಸ್’ಟೇಬಲ್ ಅಮಾನತು

ತುಮಕೂರು: ಪೊಲೀಸ್ ಠಾಣೆಯಲ್ಲಿ ವ್ಯಕ್ತಿಗೆ ನಿಂದಿಸಿ, ಹಲ್ಲೆ- ಹೆಡ್’ಕಾನ್ಸ್’ಟೇಬಲ್ ಅಮಾನತು

0

ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಥಳಿಸಿರುವ ಹೆಡ್ ಕಾನ್ಸ್​’ಟೇಬಲ್​ನನ್ನು ಅಮಾನತು ಮಾಡಲಾಗಿದೆ.

ಈ ಕುರಿತ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಮಾಹಿತಿ ನೀಡಿದ್ದು, ವೈರಲ್ ಆಗಿರುವ ವಿಡಿಯೋವನ್ನು ವೀಕ್ಷಿಸಿದ್ದೇನೆ.

ಹೆಡ್ ಕಾನ್ಸ್​’ಟೇಬಲ್ ಕೇಶವನಾಯ್ಕ ವರ್ತನೆ ಕುರಿತು ಇಲಾಖೆ ತನಿಖೆ ನಡೆಸುವಂತೆ ಸೂಚಿಸಲಾಗಿದ್ದು, ಹೆಡ್ ಕಾನ್ಸ್​’ಟೇಬಲ್​ನನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಗಂಡ ಹೆಂಡತಿ ನಡುವಿನ ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಗೆ ವ್ಯಕ್ತಿ ಬಂದ ವೇಳೆ ಈ ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಎಸ್​’ಪಿ ತಿಳಿಸಿದ್ದಾರೆ.

ಹಿಂದಿನ ಲೇಖನಸಿಹಿ ಗೆಣಸಿನಲ್ಲಿ ಸಿಗುವ ಆರೋಗ್ಯಕಾರಿ ಪ್ರಯೋಜನಗಳು
ಮುಂದಿನ ಲೇಖನನಟಿ ಪ್ರಿಯಾಂಕಾ ಉಪೇಂದ್ರ ಜನ್ಮದಿನ: ಕೈಮರ ಚಿತ್ರತಂಡದಿಂದ ಸ್ಪೆಷಲ್ ಪೋಸ್ಟರ್ ಬಿಡುಗಡೆ