ಮನೆ ರಾಜ್ಯ ಹಿರಿಯ ನಟಿ ತಾರಾಗೆ ಮಾತೃ ವಿಯೋಗ

ಹಿರಿಯ ನಟಿ ತಾರಾಗೆ ಮಾತೃ ವಿಯೋಗ

0

ಮೈಸೂರು (Mysuru)- ಹಿರಿಯ ನಟಿ ತಾರಾ ಅನುರಾಧ (Tara Anurada) ಅವರ ತಾಯಿ ಪುಷ್ಪ(76) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೈಸೂರಿನಲ್ಲಿ ಸಿನಿಮಾವೊಂದರ ಚಿತ್ರೀಕರಣವೊಂದರಲ್ಲಿ ತಾರಾ ಹಾಗೂ ಅವರ ತಾಯಿ ಪುಷ್ಪ ಭಾಗವಹಿಸಿದ್ದರು. ಈ ವೇಳೆ ಪುಷ್ಪ ಅವರಿಗೆ ತೀವ್ರವಾಗಿ ವಾಂತಿಯಾಗಿ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಜೆಎಸ್​​ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಮೈಸೂರಿನಿಂದ ಪಾರ್ಥಿವ ಶರೀರವನ್ನು ಬೆಂಗಳೂರಿನ ಜೆ.ಪಿ.ನಗರದ ನಿವಾಸಕ್ಕೆ ತರುವ ವ್ಯವಸ್ಥೆ ಮಾಡಲಾಗಿದೆ ಎಂದು ಅಳಿಯ ವೇಣು ತಿಳಿಸಿದರು.

ಹಿಂದಿನ ಲೇಖನಐಸ್‌ ಕ್ರೀಂ ಬಾಕ್ಸ್‌ ನಲ್ಲಿ ಉಸಿರುಗಟ್ಟಿ ಇಬ್ಬರು ಬಾಲಕಿಯರ ಸಾವು
ಮುಂದಿನ ಲೇಖನಸಿದ್ದರಾಮಯ್ಯ ತಾನು ಮೊದಲು ಗೆಲ್ತಾರಾ ನೋಡಿಕೊಳ್ಳಲಿ: ಹೆಚ್‌.ಡಿ.ಕುಮಾರಸ್ವಾಮಿ ತಿರುಗೇಟು