ಮನೆ ಸುದ್ದಿ ಜಾಲ ಐಸ್‌ ಕ್ರೀಂ ಬಾಕ್ಸ್‌ ನಲ್ಲಿ ಉಸಿರುಗಟ್ಟಿ ಇಬ್ಬರು ಬಾಲಕಿಯರ ಸಾವು

ಐಸ್‌ ಕ್ರೀಂ ಬಾಕ್ಸ್‌ ನಲ್ಲಿ ಉಸಿರುಗಟ್ಟಿ ಇಬ್ಬರು ಬಾಲಕಿಯರ ಸಾವು

0

ಮೈಸೂರು (Mysuru)- ಕಣ್ಣಾಮುಚ್ಚಾಲೆ ಆಡುವ ವೇಳೆ ಐಸ್‌ ಕ್ರೀಂ ಬಾಕ್ಸ್‌ ಒಳಗೆ ಅವಿತು ಕುಳಿತ ಇಬ್ಬರು ಬಾಲಕಿಯರು ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಮಸಗೆ ಗ್ರಾಮದ ನಾಗರಾಜು-ಚಿಕ್ಕದೇವಮ್ಮ ಎಂಬವರ ಪುತ್ರಿ ಭಾಗ್ಯ(12) ಹಾಗೂ ರಾಜನಾಯಕ-ಗೌರಮ್ಮ ಎಂಬುವರ ಪುತ್ರಿ ಕಾವ್ಯ (7) ಮೃತಪಟ್ಟ ಬಾಲಕಿಯರು.

ಮಧ್ಯಾಹ್ನ 12ರ ಸಮಯದಲ್ಲಿ ಕಣ್ಣಾ ಮುಚ್ಚಾಲೆ ಆಟ ಆಡುವಾಗ ತಗಡೂರು ಗ್ರಾಮದ ಹನುಮಂತನಾಯಕ ಎಂಬವರಿಗೆ ಸೇರಿದ ಐಸ್ ಕ್ರೀಮ್ ಬಾಕ್ಸ್​ನಲ್ಲಿ ಅವಿತುಕೊಳ್ಳಲು ಒಳಗೆ ಹೋಗಿದ್ದಾರೆ. ಈ ವೇಳೆ ಬಾಕ್ಸ್​ನ ಬಾಗಿಲು ಲಾಕ್ ಆಗಿದೆ.​ ಪರಿಣಾಮ, ಉಸಿರುಗಟ್ಟಿ ಇಬ್ಬರೂ ಸಾವಿಗೀಡಾಗಿದ್ದಾರೆ.

ಸುಮಾರು ಅರ್ಧ ಗಂಟೆ ಕಳೆದರೂ ಹೊರಬರದ ಕಾರಣ ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ವಿಚಾರವಾಗಿ ಯಾವುದೇ ದೂರು ದಾಖಲಾಗಿಲ್ಲ. ಮೃತ ಬಾಲಕಿಯರಿಬ್ಬರ ಶವ ಸಂಸ್ಕಾರ ನೇರವೇರಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಹಿಂದಿನ ಲೇಖನಗೌಡರ ಕುಟುಂಬ ನಂಬರ್‌ ಗೇಮ್‌ ನಲ್ಲಿ ಪಳಗಿದೆ: ಅಶ್ವತ್ಥ ನಾರಾಯಣ
ಮುಂದಿನ ಲೇಖನಹಿರಿಯ ನಟಿ ತಾರಾಗೆ ಮಾತೃ ವಿಯೋಗ