ಮನೆ ಮನರಂಜನೆ ಟಾಕ್ಸಿಕ್ ಚಿತ್ರದ ರೆಬೆಕಾ ಪಾತ್ರದಲ್ಲಿ ನಟಿ ತಾರಾ ಸುತಾರಿಯಾ

ಟಾಕ್ಸಿಕ್ ಚಿತ್ರದ ರೆಬೆಕಾ ಪಾತ್ರದಲ್ಲಿ ನಟಿ ತಾರಾ ಸುತಾರಿಯಾ

0

ನಟ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಒಂದೊಂದೇ ಪೋಸ್ಟರ್‌ಗಳು ರಿವೀಲ್ ಆಗುತ್ತೀವಿ. ಮಾರ್ಚ್ 19ಕ್ಕೆ ವಿಶ್ವದಾದ್ಯಂತ ತೆರೆಗೆ ಬರುವುದಕ್ಕೆ ಸಿದ್ಧತೆ ಮಾಡಿಕೊಂಡಿರುವ ಟಾಕ್ಸಿಕ್ ಚಿತ್ರವು ಒಂದೊಂದೇ ಕ್ಯಾರೆಕ್ಟರ್‌ಗಳನ್ನು ಅನಾವರಣ ಮಾಡುತ್ತಿದೆ. ಆ ಪೈಕಿ ರೆಬೆಕಾ ಪಾತ್ರವನ್ನ ಪರಿಚಯಿಸಿದ್ದು, ಈ ಪಾತ್ರದಲ್ಲಿ ನಟಿ ತಾರಾ ಸುತಾರಿಯಾ ನಟಿಸುತ್ತಿದ್ದಾರೆ.‌

ಈ ಹಿಂದೆ ಕಿಯಾರಾ ಅಡ್ವಾನಿಯ ನಡಿಯಾ ಪಾತ್ರವನ್ನ, ಹುಮಾ ಖುರೇಷಿ ಅವರ ಎಲೆಜೆಬೆತ್ ಹಾಗೂ ನಯನತಾರಾ ಅವರ ಗಂಗಾ ಪಾತ್ರದ ಬಗ್ಗೆ ಈಗಾಗ್ಲೇ ಹಿಂಟ್ ಕೊಟ್ಟಿದೆ ಚಿತ್ರತಂಡ. ಅವರ ಪಾತ್ರಗಳ ಫಸ್ಟ್‌ಲುಕ್ ರಿಲೀಸ್ ಮಾಡಿ ಅಭಿಮಾನಿಗಳ ಸಂಭ್ರಮವನ್ನ ದುಪ್ಪಟ್ಟು ಮಾಡಿದೆ ಚಿತ್ರತಂಡ.

ಗೀತು ಮೋಹನ್‌ದಾಸ್ ಹಾಗೂ ಯಶ್ ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರುವ ಟಾಕ್ಸಿಕ್ ಸಿನಿಮಾ ಮೇಲೆ ದೊಡ್ಡ ನಿರೀಕ್ಷಗಳಿವೆ. ವಿಶ್ವದಾದ್ಯಂತ ಸಿನಿಮಾವನ್ನ ರಿಲೀಸ್ ಮಾಡಲು ಅದ್ಧೂರಿ ತಯಾರಿ ನಡೆಯುತ್ತಿದೆ. ಇನ್ನು ಯಶ್ ಹುಟ್ಟುಹಬ್ಬಕ್ಕೆ ಯಾವ ರೀತಿ ಗಿಫ್ಟ್ ಸಿಗಲಿದೆ ಅನ್ನೋದು ಮತ್ತಷ್ಟು ಕೌತುಕತೆ ಮೂಡಿಸಿದೆ.