ಮನೆ ಅಪರಾಧ ಭ್ರಷ್ಟಾಚಾರ ಆರೋಪ ಹಿನ್ನಲೆ ಆಡಳಿತ ಅಧಿಕಾರಿ ಅಮಾನತು

ಭ್ರಷ್ಟಾಚಾರ ಆರೋಪ ಹಿನ್ನಲೆ ಆಡಳಿತ ಅಧಿಕಾರಿ ಅಮಾನತು

0

Join Our Whatsapp Group

ಮಂಡ್ಯ:- ಭ್ರಷ್ಟಾಚಾರ ಹಾಗೂ ಕರ್ತವ್ಯ ಲೋಪದ ಆರೋಪದ ಹಿನ್ನಲೆಯಲ್ಲಿ ನಾಗಮಂಗಲ ತಾಲ್ಲೂಕಿನ ಬಿದರಕೆರೆ ವೃತ್ತದ ಆಡಳಿತ ಅಧಿಕಾರಿ ನಿಂಗಪ್ಪ ಹ ಸುರಪೂರ್ ಅವರನ್ನು  ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಆದೇಶಿಸಿದ್ದಾರೆ.

ತಾಲ್ಲೂಕಿನ ಲಾಳನಕೆರೆ ಗ್ರಾಮದ ಲಿಂಗಪ್ಪ ಎಂಬುವರು ತಮ್ಮ ಬಾಬ್ತು ಲಾಳನಕೆರೆ ಗ್ರಾಮದ ಸರ್ವೆ ನಂ.30/1,29,/6,29/19 ಮತ್ತು 29/13 ರ ಜಮೀನನ್ನು ಖಾತೆ ಮಾಡಿಕೊಡಲು ತಮ್ಮಿಂದ ಲಂಚ ವನ್ನು ಪಡೆದುಕೊಂಡು ಖಾತೆ ಮಾಡಿಕೊಟ್ಟಿರುವುದಿಲ್ಲ ಎಂದು ದೂರಿದ್ದರು. ಜಿಲ್ಲಾಧಿಕಾರಿಗಳು ದೂರ ಮನವಿ ಆಲಿಸಿ ಜೂನ್ 27 ರಂದು ಕಚೇರಿ ಸಿಬ್ಬಂದಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ಆದೇಶಿಸಿದ್ದರು.

ಸಮಿತಿಯು ಲಂಚ ಸ್ವೀಕರಿಸಿರುವುದು ಧೃಡ ಎಂದು ವರದಿಯಲ್ಲಿ ತಿಳಿಸಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಭ್ರಷ್ಟಾಚಾರ ಹಾಗೂ ಕರ್ತವ್ಯ ಲೋಪದ ಆರೋಪದ  ಮೇರೆಗೆ ನಿಂಗಪ್ಪ ಹ ಸುರಪೂರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.