ಮನೆ ಅಪರಾಧ ಬೀದಿ ನಾಯಿಗಳ ದಾಳಿಗೆ ಮಗು ಬಲಿ

ಬೀದಿ ನಾಯಿಗಳ ದಾಳಿಗೆ ಮಗು ಬಲಿ

0

ಭದ್ರಾವತಿ(Bhadravati): ತಾಲೂಕು ದೊಣಬಘಟ್ಟ (ದಡಮಘಟ್ಟ) ಗ್ರಾಮದಲ್ಲಿ ಬೀದಿ ನಾಯಿಗಳ ಹಿಂಡು 4 ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ್ದು, ಮಗು ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ನಡೆದಿದೆ.

ಸೈಯದ್ ಮದನಿ  ಮೃತ ಮಗು.

ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ಮಗುವಿನ ತಂದೆ ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ತಂದೆಯನ್ನು ಮಗು ಹಿಂಬಾಲಿಸಿಕೊಂಡು ಹೋಗುವಾಗ ಸುಮಾರು 7-8 ಬೀದಿ ನಾಯಿಗಳ ಹಿಂಡು ಮಗು ಮೇಲೆ ದಾಳಿ ಮಾಡಿದೆ.

ಇದರಿಂದಾಗಿ ಮಗು ತೀವ್ರ ಅಸ್ವಸ್ಥತೆಯಿಂದ ಬಳತ್ತಿರುವುದನ್ನು ಕಂಡು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

ಮಗುವಿನ ತಂದೆ ಸ್ವಲ್ಪ ದೂರಲ್ಲೇ ಯಂತ್ರದಲ್ಲಿ ಭತ್ತ ಕಟಾವು ಮಾಡಿಸುತ್ತಿದ್ದರು. ಯಂತ್ರದ ಶಬ್ದಕ್ಕೆ ಬೀದಿ ನಾಯಿಗಳ ದಾಳಿ ಗೊತ್ತಾಗಿಲ್ಲ.  ಈ ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಹಿಂದಿನ ಲೇಖನಉತ್ತರ ಅಫ್ಘಾನಿಸ್ತಾನದ ಧಾರ್ಮಿಕ ಶಾಲೆಯಲ್ಲಿ ಬಾಂಬ್ ಸ್ಫೋಟ: 19 ಮಂದಿ ಸಾವು
ಮುಂದಿನ ಲೇಖನನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಎಚ್.ಡಿ.ದೇವೇಗೌಡ ದಂಪತಿ