ಮನೆ ಸಾಹಿತ್ಯ ಪ್ರಂಶಶಿಸುವ ಗುಣ

ಪ್ರಂಶಶಿಸುವ ಗುಣ

0

               ಯಾವಾಗ ನೋಡಿದರೂ ಒಂದಲ್ಲೊಂದು ಕಾರಣಕ್ಕಾಗಿ ತಂದೆ ತಾಯಿಯರು, ಶಿಕ್ಷಕರನ್ನು ನನ್ನನ್ನು ಬೈಯುತ್ತಿರುತ್ತಾರೆ; ಹಾಗಾದರೆ ನಾನು ಯಾವತ್ತೂ ಒಳ್ಳೆಯ ಕೆಲಸವನ್ನು; ಮೆಚ್ಚಿಕೊಳ್ಳುವಂತಹ ಕೆಲಸವನ್ನು ಮಾಡುವುದೇ ಇಲ್ಲವೇ ; ಒಂದು ಬಾರಿಯಾದರೂ ಅದರ ಬಗ್ಗೆ ಹೇಳಿದ್ದೀರಾ ಎಂದು ಅನೇಕ ಸಂದರ್ಭಗಳಲ್ಲಿ ನಿಮಗೆ ಅನಿಸುತ್ತದೆ. ಆದರೆ ಈ ರೀತಿ ನೀವುಗಳೇ ಅಂದುಕೊಳ್ಳುವಾಗಲೇ ನಿಮ್ಮ ಬಗ್ಗೆ ಕೂಡ ಅನೇಕರಿಗೆ ಈ ರೀತಿ ಅನಿಸುತ್ತಿರುತ್ತದೆ. “ಸರ್,ನೀವು ಈ ಪಾಠವನ್ನು ಮಾಡಿದಾಗ ವಿಧಾನ ನನಗೆ ಬಹಳ ಇಷ್ಟವಾಯಿತು.  ಮೇಡಂ, ನೀವು ನನಗೆ ಕಲಿಸಿದ ಈ ಆಟ ತುಂಬಾ ಖುಷಿಕೊಟ್ಟಿತ್ತು” ಎಂದು ವಿದ್ಯಾರ್ಥಿಗಳು ಅಧ್ಯಾಪಕರ ಬಳಿ ಹೇಳುತ್ತಾರಾ ?  ”ನೀವು ಬಹಳ ಕಷ್ಟಪಟ್ಟು ಸಾಲ ತೆಗೆದುಕೊಂಡು ಬಂದು ನನಗೆ ಪುಸ್ತಕ ತೆಗೆಸಿಕೊಟ್ಟಿದ್ದಕ್ಕೆ ನಾನು ಬಹಳ ಕೃತಜ್ಞನಾಗಿದ್ದೇನೆ ”ಎಂದು ಅಪ್ಪ ಅಮ್ಮನ ಬಳಿ ಹೇಳುತ್ತಾರಾ? ನೀವು ಹೀಗೆ ಹೇಳಿದರೆ ಧಿಮಾಕಿನ ಪ್ರವೃತ್ತಿಯ  ಶಿಕ್ಷಕರು,ತಂದೆ ತಾಯಿ,“ಹೂಂ, ಆಯ್ತಾಯ್ತು ”ಎಂದು ನಿಮ್ಮ ಮಾತುಗಳನ್ನು ನಿರ್ಲಕ್ಷಿಸಿದವರ ಹಾಗೆ ಉತ್ತರಿಸಲೂಬಹುದು. ಆದರೂ ಒಳಗೊಳಗೇ ಅವರು ಸಂತೋಷ ಪಡುತ್ತಾರೆ ನಾವು ಒಳ್ಳೆಯದನ್ನು ಮಾಡಿದಾಗ ಮಕ್ಕಳು ತಮ್ಮನ್ನು ಇಷ್ಟಪಡುತ್ತಾರೆ. ಎಂಬ ಒಂದು ಸಂದೇಶ ಅವರಿಗೆ ತಲುಪುತ್ತದೆ.ಅದಕ್ಕಿಂತ ಮುಖ್ಯವಾಗಿ ನಿಮ್ಮಲ್ಲಿ ಒಂದು ಆರೋಗ್ಯಕಾರಿ ಮನೋಭಾವ ಬೆಳೆಯುತ್ತದೆ.

Join Our Whatsapp Group

       ಆದರೆ ನಮ್ಮ ಶೈಕ್ಷಣಿಕ ಸನ್ನಿವೇಶದ ದುರದೃಷ್ಟ ಏನೆಂದರೆ ಸಹಪಾಠಿಗಳ ಬಗ್ಗೆ ಶಿಕ್ಷಕರಿಗೆ ಚಾಡಿ ಮಾತುಗಳನ್ನು ಹೇಳಿ ಶಿಕ್ಷಕರಿಗೆ ಒಳ್ಳೆಯವರೇನಿಸಿಕೊಳ್ಳುವ ವಿದ್ಯಾರ್ಥಿಗಳು ಸಿಗುತ್ತಾರೆಯೇ ಹೊರತು ಸಹಪಾಠಿಯ ಬಗ್ಗೆ ಶಿಕ್ಷಕರು ತಪ್ಪು ತಿಳಿದುಕೊಂಡಾಗ ತನ್ನ ಸಹಪಾಠಿ ಇಂತಿಂತಹ ವಿಚಾರಗಳಲ್ಲಿ ಚೆನ್ನಾಗಿದ್ದಾರೆ ಎಂದು ತಿಳಿಸಿ ನಿಜವಾದ ಅರ್ಥದಲ್ಲಿ ಒಳ್ಳೆಯತನದಿಂದ ನಡೆದುಕೊಳ್ಳುವ ವಿದ್ಯಾರ್ಥಿಗಳು ಸಿಗುವುದಿಲ್ಲ.ಈ ಪ್ರಕೃತಿ ಮಕ್ಕಳಲ್ಲಿ ಮಾತ್ರವಲ್ಲ ; ಹಿರಿಯರಲ್ಲೂ ಕಾಣಸಿಗುವುದಿಲ್ಲ. ಆದರೆ ಈ ರೀತಿಯ ಒಂದು ಪ್ರವೃತ್ತಿಯನ್ನು ರೂಢಿಸಿಕೊಳ್ಳದ ಹೊರತು ನಾವು ಇನ್ನೊಬ್ಬರ ನಂಬಿಕೆಗೆ ಪಾತ್ರರಾಗುವ ವ್ಯಕ್ತಿತ್ವಗಳಾಗಿ ಬೆಳೆಯುವುದಿಲ್ಲ.ಅಂತಹ ವ್ಯಕ್ತಿತ್ವವಾಗಿ ಬೆಳೆಯುವುದಕ್ಕಾಗಿ ನಾವು ಎಲ್ಲರಲ್ಲಿಯೂ ಇರುವ ಒಳ್ಳೆಯ ಗುಣಗಳನ್ನು ಪ್ರಶಂಶಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಯಾರೋ ಒಬ್ಬರು ನಮಗೆ ಅವಮಾನವೆನ್ನೇ ಮಾಡಿರಬಹುದು, ಆ ಅವಮಾನವನ್ನು ಒಂದು ಸವಾಲಾಗಿ ತೆಗೆದುಕೊಳ್ಳಲು ನಮಗೆ ಸಾಧ್ಯವಾಗುವುದಾದರೆ ಅವಮಾನ ಮಾಡುವ ಮೂಲಕವೂ ಅವನು ನಮಗೆ ಒಳ್ಳೆಯದನ್ನೇ ಮಾಡುತ್ತಿದ್ದಾರೆ ಈ ರೀತಿ ವ್ಯಕ್ತಿತ್ವವನ್ನು ಬೆಳೆಯೀಸಿಕೊಳ್ಳಲು ಕಷ್ಟವಿದೆ ಆದರೆ ಬೆಳೆಸಿಕೊಂಡರೆ ತುಂಬಾ ಒಳ್ಳೆಯದು.