ಮನೆ ಸುದ್ದಿ ಜಾಲ ಬೀದರ್‌ನ ಉಗ್ರ ನರಸಿಂಹ ದೇಗುಲಕ್ಕೆ ನಾಲ್ಕು ವರ್ಷಗಳ ಬಳಿಕ ಭಕ್ತರ ಪ್ರವೇಶಕ್ಕೆ ಅವಕಾಶ

ಬೀದರ್‌ನ ಉಗ್ರ ನರಸಿಂಹ ದೇಗುಲಕ್ಕೆ ನಾಲ್ಕು ವರ್ಷಗಳ ಬಳಿಕ ಭಕ್ತರ ಪ್ರವೇಶಕ್ಕೆ ಅವಕಾಶ

0

ಬೀದರ್: ಐತಿಹಾಸಿಕ, ಪುರಾಣ ಪ್ರಸಿದ್ಧ ಉಗ್ರ ನರಸಿಂಹ ಸ್ವಾಮಿ ದೇವಸ್ಥಾನದ ಬಾಗಿಲು ನಾಲ್ಕು ವರ್ಷಗಳ ಬಳಿಕ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು,  ಭಕ್ತಾದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಮೊದಲು ಆಕ್ಸಿಜನ್ ಹಾಗೂ ನೀರಿನ ಸಮಸ್ಯೆಯಿಂದ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರಲಿಲ್ಲ. ಜೊತೆಗೆ ಕೊರೊನಾ ಕೂಡ ಒಂದು ಕಾರಣವಾಗಿತ್ತು. ಹಾಗಾಗಿ, ನಾಲ್ಕು ವರ್ಷಗಳಿಂದ ಗುಹಾ ದೇವಾಲಯದಲ್ಲಿರುವ ಉಗ್ರ ನರಸಿಂಹ ಸ್ವಾಮಿಯ ದರ್ಶನ ಭಕ್ತರಿಗಿರಲಿಲ್ಲ.

ಈ ಗುಹಾ ದೇವಾಲಯದಲ್ಲಿ ಸುಮಾರು 200 ಮೀಟರ್ ದೂರ ಎದೆ ಮಟ್ಟದವರೆಗೆ ಹರಿಯುವ ನೀರಿನಲ್ಲಿ ಸಾಗಿ ದೇವರ ದರ್ಶನ ಪಡೆಯಬೇಕಿತ್ತು. ಭಯಂಕರ ಬರಗಾಲ ಇದ್ದರೂ ದೇವಸ್ಥಾನದ ಸನ್ನಿಧಿಯಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಆದರೆ, ನಂತರ ಕೊರೊನಾ ಹೊಡೆತಕ್ಕೆ ಎಲ್ಲವೂ ಬಂದ್ ಆಗಿತ್ತು. ಇದೀಗ ಮಂದಿರದಲ್ಲಿ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆವರೆಗೆ ಭಕ್ತರಿಗೆ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ.