ವೃತ್ತಿಪರ ವಕೀಲರು ವಕೀಲ ವೃತ್ತಿಯಿಂದ ದೂರು ಉಳಿಯುವ ವಕೀಲರಿಗೆ ಕಹಿ ಸುದ್ದಿಯೊಂದಿದೆ. ನಿರಂತರ 5 ವರ್ಷಗಳಿಗಿಂತ ಹೆಚ್ಚು ಕಾಲ ವಕೀಲಿಕೆ ನಡೆಸದಿದ್ದರೆ ಅಂಥವರು ಭಾರತೀಯ ವಕೀಲರ ಪರಿಷತ್ತು ನಡೆಸುವ ಎಐಬಿಇ ಪರೀಕ್ಷೆ ಎದುರಿಸುವುದು ಕಡ್ಡಾಯ.
ವೃತ್ತಿಪರ ವಕೀಲರಾಗಿ ವಕೀಲರ ಪರಿಷತ್ತಿನಲ್ಲಿ ಹೆಸರು ನೋಂದಾಯಿಸಿ ವಕೀಲ ವೃತ್ತಿಯಿಂದ ದೂರು ಉಳಿಯುವ ವಕೀಲರಿಗೆ ನಿರಂತರ 5 ವರ್ಷಗಳಿಗಿಂತ ಹೆಚ್ಚು ಕಾಲ ವಕೀಲಿಕೆ ನಡೆಸದಿದ್ದರೆ ಅಂಥವರು ಭಾರತೀಯ ವಕೀಲರ ಪರಿಷತ್ತು ನಡೆಸುವ ಎಐಬಿಇ ಪರೀಕ್ಷೆ ಎದುರಿಸುವುದು ಕಡ್ಡಾಯ.
ಈ ವಿಷಯವನ್ನು ಸ್ವತಃ ಭಾರತೀಯ ವಕೀಲರ ಪರಿಷತ್ತು ಸುಪ್ರೀಂ ಕೋರ್ಟಿಗೆ ಲಿಖಿತವಾಗಿ ತಿಳಿಸಿದೆ. ಸತತವಾಗಿ 5 ವರ್ಷಕ್ಕಿಂತ ಅಧಿಕ ಅವಧಿ ವಕೀಲ ವೃತ್ತಿಯಿಂದ ಹೊರಗಿದ್ದರೆ ಅಂತವರು ಪುನರಪಿ ವಕೀಲರಾಗಿ ಪ್ರಾಕ್ಟೀಸ್ ಮಾಡಲು ಐಬಿಸಿ ʻಆಲ್ ಇಂಡಿಯಾ ಬಾರ್ ಎಕ್ಸಾಮ್ʼ ಪರೀಕ್ಷೆ ಬರೆಯಬೇಕು ಎಂದು ಬಿಸಿಐ ಹೇಳಿದೆ.
ವಕೀಲರಾದ ದುರ್ಗಾ ದತ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ, ವಕೀಲ ವೃತ್ತಿ ಮತ್ತು ಕಾನೂನು ಶಿಕ್ಷಣದ ಮಾನದಂಡಗಳನ್ನು ಮೇಲ್ದರ್ಜೆಗೆ ಏರಿಸುವಂತೆ ಕೋರಿದ್ದರು. ಈ ಅರ್ಜಿ ಕುರಿತು ಅಫಿಡವಿಟ್ ಸಲ್ಲಿಸಿದ ಐಬಿಸಿ, ಸುಪ್ರೀಂ ಕೋರ್ಟಿಗೆ ಈ ಮಾಹಿತಿ ನೀಡಿದೆ.
ಯಾವುದೇ ವ್ಯಕ್ತಿ ಕಾನೂನು ಪದವಿ ಪಡೆದ ಬಳಿಕ ವಕೀಲರಾಗಿ ಪ್ರಾಕ್ಟೀಸ್ ಮಾಡಲು ಐಬಿಸಿ ನಡೆಸುವ ಎಐಬಿಇ ಪರೀಕ್ಷೆ ಪಾಸ್ ಆಗಬೇಕು. ಅಂಥವರಿಗೆ ಮಾತ್ರ ವಕೀಲರಾಗಿ ವೃತ್ತಿ ನಡೆಸಲು ಪ್ರಾಕ್ಟೀಸ್ ಸರ್ಟಿಫಿಕೇಟ್ ನೀಡಲಾಗುತ್ತದೆ. ಸರ್ಟಿಫಿಕೇಟ್ ಪಡೆದ ಬಳಿಕ, ವಕೀಲರಾಗಿ ಸೇವೆ ಸಲ್ಲಿಸದೆ ಇತರ ವೃತ್ತಿಗೆ ತೆರಳಿ ವೃತ್ತಿಯಿಂದ ಐದು ವರ್ಷಕ್ಕೂ ಅಧಿಕ ಕಾಲ ದೂರ ಇದ್ದರೆ ಅಂತಹವರು ಮತ್ತೆ ಎಐಬಿಇ ಪರೀಕ್ಷೆ ಪಾಸು ಮಾಡುವುದು ಕಡ್ಡಾಯ ಎಂದು ಐಬಿಸಿ ಪ್ರಮಾಣ ಪತ್ರದಲ್ಲಿ ತಿಳಿಸಿದೆ.
ಆದರೆ ಈ ನಿಯಮದಲ್ಲಿ ಕೆಲವರಿಗೆ ವಿನಾಯಿತಿ ನೀಡಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕವಾದವರು, ನ್ಯಾಯಾಂಗ ಸೇವೆಗಳಲ್ಲಿ ತೊಡಗಿಸಿಕೊಂಡವರು, ಕಂಪೆನಿಗಳ ವಕೀಲರಾಗಿ ಸೇವೆ ಸಲ್ಲಿಸುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂಬುದನ್ನು ಬಿಸಿಐ ಸ್ಪಷ್ಟಪಡಿಸಿದೆ.