ಮನೆ ರಾಜ್ಯ ಮಾಗಡಿಯಲ್ಲಿ ದನದ ಕೊಟ್ಟಿಗೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಮೃತ

ಮಾಗಡಿಯಲ್ಲಿ ದನದ ಕೊಟ್ಟಿಗೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಮೃತ

0

ರಾಮನಗರ (Ramnagar): ದನದ ಕೊಟ್ಟಿಗೆಯ ಗೋಡೆಯು ಪಕ್ಕದ ಶೆಡ್ ಮೇಲೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಮಾಗಡಿ ತಾಲ್ಲೂಕಿನ ಕೂಡ್ಲೂರು ಕ್ರಾಸ್ ಬಳಿ ಭಾನುವಾರ ಮುಂಜಾನೆ ನಡೆದಿದೆ.

ಫರ್ವೀನ್ (4) ಹಾಗೂ ಇಷಿಕಾ (3) ಮೃತಪಟ್ಟ ಮಕ್ಕಳು. ಘಟನೆಯಲ್ಲಿ ಮೀನಾ ಬಿತ್ತು‌ (30) ಹಾಗೂ ಮೋನಿಷಾ (35) ಗಾಯಗೊಂಡಿದ್ದು, ಅವರನ್ನು ಮಾಗಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ನೇಪಾಳದ ಮೂಲದ ಈ ಕಾರ್ಮಿಕರ ಕುಟುಂಬವು ಸಮೀಪದ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಶೆಡ್ ನಲ್ಲಿ ವಾಸವಿತ್ತು. ನಿರಂತರ ಮಳೆಯಿಂದಾಗಿ ಗಂಗರಂಗಮ್ಮ ಎಂಬುವರಿಗೆ ಸೇರಿದ ದನದ ಕೊಟ್ಟಿಗೆಯ ಗೋಡೆಯು ಪಕ್ಕದಲ್ಲೇ ಇದ್ದ ಶೆಡ್ ನ ಮೇಲೆ ಹಠಾತ್ ಕುಸಿಯಿತು. ಇದರಿಂದಾಗಿ ನಿದ್ರೆಯಲ್ಲಿದ್ದ ಮಕ್ಕಳು ಚಿರನಿದ್ರೆಗೆ ಜಾರಿದ್ದಾರೆ.

ಹಿಂದಿನ ಲೇಖನವಕೀಲಿಕೆ ವೃತ್ತಿಯಿಂದ 5 ವರ್ಷ ದೂರವಿದ್ದರೆ ಮತ್ತೆ ಎಐಬಿಇ ಪರೀಕ್ಷೆ ಎದುರಿಸುವುದು ಕಡ್ಡಾಯ
ಮುಂದಿನ ಲೇಖನಹುಣಸೂರು ತಾಲೂಕು ಕಚೇರಿ ದುರಸ್ತಿಗೆ ಹಣ ಬಿಡುಗಡೆಗೆ ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ