ಮನೆ ಅಪರಾಧ ಮದುವೆಯಾದ 6 ವರ್ಷದ ಬಳಿಕ ಆಟೋ ಚಾಲಕನೊಂದಿಗೆ ಪ್ರೇಮ: ಗಂಡ, ಮಗಳು ಬೇಡವೆಂದ ಮಹಿಳೆ

ಮದುವೆಯಾದ 6 ವರ್ಷದ ಬಳಿಕ ಆಟೋ ಚಾಲಕನೊಂದಿಗೆ ಪ್ರೇಮ: ಗಂಡ, ಮಗಳು ಬೇಡವೆಂದ ಮಹಿಳೆ

0

ಚಾಮರಾಜನಗರ: ಮದುವೆಯಾದ 6 ವರ್ಷದ ಬಳಿಕ  ಆಟೋ ಚಾಲಕನೊಂದಿಗೆ ಪ್ರೇಮಾಂಕುರವಾಗಿ ಪತಿ ಹಾಗೂ ಮಗುವನ್ನು ಬಿಟ್ಟು ಮಹಿಳೆ ತೆರಳಿರುವ ಘಟನೆ ಚಾಮರಾಜನಗರ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಗ್ರಾಮವೊಂದರ ದೀಪಾ (ಹೆಸರು ಬದಲಿಸಲಾಗಿದೆ) ಎಂಬುವವರಿಗೆ ಮದುವೆಯಾಗಿ 6 ವರ್ಷಗಳಾಗಿದ್ದು, 5 ವರ್ಷದ ಒಬ್ಬಳು ಮಗಳಿದ್ದಾಳೆ. ಆದರೆ, ಕಳೆದ 7-8 ತಿಂಗಳುಗಳ ಹಿಂದೆ ಆಟೋ ಚಾಲಕನೊಬ್ಬ ಪರಿಚಯವಾಗಿತ್ತು. ಆ ಪರಿಚಯ ಈಗ ಪ್ರೇಮಕ್ಕೆ ತಿರುಗಿದೆ.

ಆಟೋ ಚಾಲಕನ ಸ್ನೇಹ ಗಟ್ಟಿಯಾದ ಹಿನ್ನೆಲೆ ಈಕೆ ಕಳೆದ 6 ತಿಂಗಳ ಹಿಂದೆ ಮನೆ ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ಮಹಿಳಾ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ನಾಪತ್ತೆಯಾಗಿದ್ದ ಮಹಿಳೆಯನ್ನು ಮೈಸೂರಿನ ಬೆಳವಾಡಿಯಲ್ಲಿ ಪತ್ತೆ ಹಚ್ಚಿ ಕರೆತಂದಿದ್ದಾರೆ.

ಆದರೆ ಮಹಿಳೆ, ಪತಿಯೊಂದಿಗೆ ತನಗೆ ಬಾಳಲು ಇಷ್ಟವಿಲ್ಲ. ಆಟೋ ಚಾಲಕನೊಂದಿಗೆ ಲಿವಿಂಗ್ ಟುಗೆದರ್ ನಲ್ಲಿದ್ದು ಆತನನ್ನೇ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾಳೆ ಎನ್ನಲಾಗಿದ್ದು, ದೀಪಾಳ ಈ ನಿಲುವಿಗೆ ಪತಿ – ಮಗು ಕಂಗಲಾಗಿದ್ದಾರೆ‌. ಮಹಿಳಾ ಠಾಣೆ ಪೊಲೀಸರು ಸಾಕಷ್ಟು ಕೌನ್ಸೆಲಿಂಗ್ ನಡೆಸಿದರೂ ಮಹಿಳೆ ಒಪ್ಪಿಲ್ಲ. ಪ್ರಕರಣ ಸುಖಾಂತ್ಯ ನಿರೀಕ್ಷೆಯಲ್ಲಿ ಪತಿ ಇದ್ದರೆ, ಲಿವಿಂಗ್ ಟುಗೆದರ್ ನಲ್ಲಿ ಜೀವಿಸುವ ಹಂಬಲ ಮಹಿಳೆಯದ್ದಾಗಿದೆ.

ಹಿಂದಿನ ಲೇಖನಇಂದಿನ ನಿಮ್ಮ ರಾಶಿ ಭವಿಷ್ಯ
ಮುಂದಿನ ಲೇಖನಭ್ರಷ್ಟಚಾರ ಆರೋಪ: ರವಿ ಡಿ ಚನ್ನಣ್ಣನವರ್ ಸ್ಪಷ್ಟನೆ