ಮನೆ ರಾಜ್ಯ ದೀಪಾವಳಿ ರಜೆ ಮುಗಿಸಿ ಬೆಂಗಳೂರಿನತ್ತ ಜನ: ನೆಲಮಂಗಲ, ಪೀಣ್ಯ, ಕುಣಿಗಲ್ ಬೈಪಾಸ್ ಬಳಿ ಟ್ರಾಫಿಕ್​ ಜಾಮ್​

ದೀಪಾವಳಿ ರಜೆ ಮುಗಿಸಿ ಬೆಂಗಳೂರಿನತ್ತ ಜನ: ನೆಲಮಂಗಲ, ಪೀಣ್ಯ, ಕುಣಿಗಲ್ ಬೈಪಾಸ್ ಬಳಿ ಟ್ರಾಫಿಕ್​ ಜಾಮ್​

0

ಬೆಂಗಳೂರು: ದೀಪವಾಳಿ ರಜೆ ಮುಗಿಸಿ ಜನರು ಊರುಗಳಿಂದ ಬೆಂಗಳೂರಿಗೆ ಬರುತ್ತಿದ್ದಾರೆ. ಊರುಗಳಿಗೆ ತೆರಳಿದ ಜನರು ಒಮ್ಮೆಲೆ ಬಂದಿದ್ದರಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ತುಮಕೂರು-ಸಿರಾ, ನೆಲಮಂಗಲ ರಸ್ತೆಯಲ್ಲಿ ಭಾರಿ ಟ್ರಾಫಿಕ್​ ಜಾಮ್​ ಉಂಟಾಗಿದೆ.

Join Our Whatsapp Group

ರವಿವಾರ (ಅ.03) ರಾತ್ರಿಯಿಂದ ಸೋಮವಾರ (ನ.04) ಈವರೆಗೂ ಟ್ರಾಫಿಕ್​ ಜಾಮ್​ ಉಂಟಾಗಿದೆ. ಇದರಿಂದ ವಾಹನ ಸವಾರರು ಗಂಟೆಗಟ್ಟಲೇ ಟ್ರಾಫಿಕ್ ​ನಲ್ಲಿ ಸಿಲುಕಿಕೊಂಡರು.

ರವಿವಾರ ರಾತ್ರಿ ಬೆಂಗಳೂರು-ಸಿರಾ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಾವಿರಾರು ಪ್ರಯಾಣಿಕರು ಪರದಾಡಿದರು. ಇಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿದ್ದು, ವಾಹನ ವೇಗ ಗಂಟೆಗೆ 10 ಕಿಮೀ ಇತ್ತು. ರಸ್ತೆಯಲ್ಲಿ ವಾಹನಗಳು 3-5 ಕಿಲೋಮೀಟರ್‌ವರೆಗೆ ಸಾಲುಗಟ್ಟಿ ನಿಂತಿದ್ದವು.

ಟ್ವಿಟರ್​​ ಪೋಸ್ಟ್​​​

ಹಾಸನ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ನೆಲಮಂಗಲದ ಕುಣಿಗಲ್ ಬೈಪಾಸ್ ಹತ್ತಿರ ರವಿವಾರ (ನ.03)ರ ಸಂಜೆಯಿಂದ ಸೋಮವಾರ (ನ.04)ರ ನಸುಕಿನ ಜಾವದವರೆಗೆ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಮಳೆ ಸಹ ಬರುತ್ತಿತ್ತು. ಇದರಿಂದ ವಾಹನ ಸವಾರರು ಪರದಾಡಿದರು. ಆದರೆ, ನೆಲಮಂಗಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಜಾಗೃತರಾಗಿ ಸಂಚಾರ ವ್ಯವಸ್ಥೆ ಸುಗಮ ಗೊಳಿಸಿದರು.

ಇನ್ನು, ಗೊರಗುಂಟೆಪಾಳ್ಯ, ಪೀಣ್ಯ ಫ್ಲೈ ಓವರ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿ ಕಿಲೋ ಮೀಟರ್​ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿವೆ. ಟ್ರಾಫಿಕ್​​ ಜಾಮ್​ನಲ್ಲಿ ಸಿಲುಕಿ ಆಂಬುಲೆನ್ಸ್ ಚಾಲಕ ಕೆಲಕಾಲ ಪರದಾಡಿದರು. ಬಳಿಕ ಪೊಲೀಸರು ಆಂಬುಲೆನ್ಸ್​ ತೆರಳಲು ಅನುವು ಮಾಡಿಕೊಟ್ಟರು. ಸದ್ಯ ಈ ರಸ್ತೆಯಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿದೆ. ಟ್ರಾಫಿಕ್​ ಜಾಮ್​ ಕ್ಲಿಯರ್​ ಮಾಡಲು ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಮೆಟ್ರೋದತ್ತ ಮುಖ ಮಾಡಿದ ಜನ

ಬೆಂಗಳೂರು ನಗರದೊಳಗೆ ಬರಲು ಟ್ರಾಫಿಕ್​ ಜಾಮ್​ ಅಡ್ಡಿಯಾದ ಹಿನ್ನೆಲಯಲ್ಲಿ ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಟ್ರಾಫಿಕ್​ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಜನರು ನಾಗಸಂದ್ರದಿಂದ ನಮ್ಮ ಮೆಟ್ರೋ ಪ್ರಯಾಣಿಸಿದರು. ಸರ್ಕಾರಿ ಬಸ್​ಗಳಿಗೂ ಕೂಡ ಟ್ರಾಫಿಕ್​ ಜಾಮ್​ ಬಿಸಿ ತಟ್ಟಿದೆ. ಗಂಟೆಗಟ್ಟಲೆ ಬಸ್​ಗಳು ಟ್ರಾಫಿಕ್​ನಲ್ಲಿ ನಿಂತಿದ್ದವು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಕೆಲ ಪ್ರಯಾಣಿಕರು ನಾಗಸಂದ್ರದಲ್ಲೇ ಬಸ್​ನಿಂದ ಇಳಿದು ಮೆಟ್ರೋ ಮೂಲಕ ಬೆಂಗಳೂರು ನಗರದೊಳಗೆ ಆಗಮಿಸಿದರು.

ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೆಟ್ರೋದತ್ತ ಮುಖ ಮಾಡಿದ್ದರಿಂದ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ ಉಂಟಾಗಿತ್ತು. ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತು ನಿಲ್ದಾಣದ ಒಳಗೆ ಪ್ರವೇಶಿಸಿದರು.