ಮನೆ ಅಪರಾಧ ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ: ಓರ್ವ ಸಾವು

ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ: ಓರ್ವ ಸಾವು

0

ಚಿಂತಾಮಣಿ (ಚಿಕ್ಕಬಳ್ಳಾಪುರ): ಓಮ್ನಿ ಕಾರು ಒಂದು ರಸ್ತೆಯಿಂದ ಹಳ್ಳಕ್ಕೆ ಬಿದ್ದು ಒಬ್ಬ ವ್ಯಕ್ತಿ ಸುಟ್ಟು ಮೃತಪಟ್ಟಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ವ್ಯಾಪ್ತಿಯ ಗೊಲಪಲ್ಲಿ ಬಳಿ ಘಟನೆ ರವಿವಾರ (ನ.03) ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ನಡೆದಿದೆ.

Join Our Whatsapp Group

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಚಿಂತಾಮಣಿ ನಗರದ ಟಿಪ್ಪುನಗರದ ವಾಸಿಯಾದ ಇಬ್ರಾಹಿಂ (48 ವರ್ಷ) ಎಂದು ತಿಳಿದುಬಂದಿದೆ.

ಇಬ್ರಾಹಿಂ ಅವರು ವ್ಯಾಪಾರ ಮಾಡಿಕೊಂಡು ಚಿಂತಾಮಣಿ ಕಡೆಯಿಂದ ಗಂಡ್ರಗಾನಹಳ್ಳಿ ಕಡೆ ಹೋಗುತ್ತಿದ್ದ ವೇಳೆ ಓಮ್ಮಿ ಕಾರು ಹಳ್ಳಕ್ಕೆ ಬಿದ್ದು ಸುಟ್ಟು ಭಸ್ಮವಾಗಿ ಕಾರಿನಲ್ಲಿದ್ದ ಇಬ್ರಾಹಿಂ ಸಹ ಸುಟ್ಟು ಹೋಗಿ ಮೃತಪಟ್ಟಿದ್ದಾನೆ.

ಘಟನೆಯ ವಿಷಯ ತಿಳಿದ ತಕ್ಷಣ ಡಿವೈಎಸ್ಪಿ ಮುರಳೀಧರ್, ಸರ್ಕಲ್ ಇನ್ಸ್ಪೆಕ್ಟರ್ ವೆಂಕಟರವಣಪ್ಪ, ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.