ಮನೆ ರಾಜಕೀಯ ಮುಂದಿನ ಕ್ರಮದ ಬಗ್ಗೆ ಶುಕ್ರವಾರದ ಸಭೆಯಲ್ಲಿ ಅಂತಿಮ ನಿರ್ಧಾರ: ಸಿಎಂ

ಮುಂದಿನ ಕ್ರಮದ ಬಗ್ಗೆ ಶುಕ್ರವಾರದ ಸಭೆಯಲ್ಲಿ ಅಂತಿಮ ನಿರ್ಧಾರ: ಸಿಎಂ

0

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಸರ್ಕಾರದಿಂದ ಹಲವು ಕ್ರಮಗಳನ್ನ ಕೈಗೊಳ್ಳಲಾಗಿದ್ದು, ಶುಕ್ರವಾರದ ಸಭೆಯಲ್ಲಿ ತಜ್ಞರ ಜತೆ ಚರ್ಚಿಸಿ ಪಾಸಿಟಿವಿಟಿ ರೇಟ್ ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಸಂಬಂಧ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಜನರ ಜೀವ ಉಳಿಸುವುದು ನಮ್ಮ ಕರ್ತವ್ಯ ಶುಕ್ರವಾರ ತಜ್ಞರ ಜತೆ ಸಭೆ ಇದೆ. ಹಾಲಿ ನಿರ್ಬಂಧಗಳ ಬಗ್ಗೆ ಪುನರ್ ಪರಿಶೀಲನೆ ಮಾಡುತ್ತೇವೆ. ಕೊರೋನಾ ಈಗ ಫ್ಲ್ಯೂ ರೀತಿ ಬಂದು ಹೋಗುತ್ತಿದೆ  ಹೀಗಾಗಿ ಎಲ್ಲ ಚಟುವಟಿಕೆಗೆ ಅವಕಾಶ ನೀಡುವ ಕುರಿತು ಚರ್ಚಿಸುತ್ತೇವೆ. ತಜ್ಞರು ಶುಕ್ರವಾರದ ವೇಳೆಗೆ ಮಾಹಿತಿ ಕೊಡುತ್ತಾರೆ. ಶುಕ್ರವಾರದ ಸಭೆ ಬಳಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಬಿಜೆಪಿ ನಾಯಕರಿಂದಲೇ ಕೋವಿಡ್  ಉಲ್ಲಂಘನೆ ಆರೋಪದ ಮೇಲೆ ಕಾಂಗ್ರೆಸ್ ನಿಂದ ರಾಜ್ಯ ಮುಖ್ಯಕಾರ್ಯದರ್ಶಿಗೆ ದೂರು ನೀಡಿರುವ ವಿಚಾರ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ಯಾರೇ ನಿಯಮ ಉಲ್ಲಂಘಿಸಿದ್ರೂ ಕ್ರಮ ಕೈಗೊಳ್ಳುತ್ತೇವೆ ಎಂದರು.

ಹಿಂದಿನ ಲೇಖನಕೊರೊನಾ: 2.58 ಲಕ್ಷ ಹೊಸ ಪ್ರಕರಣ ಪತ್ತೆ
ಮುಂದಿನ ಲೇಖನನಾನು ಮಾಸ್ಕ್ ಧರಿಸಲ್ಲ: ಸಚಿವ ಉಮೇಶ್ ಕತ್ತಿ