ಬೆಂಗಳೂರು: ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ಜಗಳ ಮತ್ತೊಂದು ಘಟ್ಟಕ್ಕೆ ತಲುಪಿದ್ದು, ಡಿ ರೂಪಾ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ವರ್ಗಾವಣೆ ಬೆನ್ನಲ್ಲೇ ಡಿ.ರೂಪಾ ಅವರು ರೋಹಿಣಿ ಸಿಂಧೂರಿ ಬಗ್ಗೆ ಮಾತನಾಡಿದ್ದು ಎನ್ನಲಾಗಿರುವ ಆಡಿಯೋ ವೈರಲ್ ಆಗಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದಂತಾಗಿದೆ.
ಡಿ.ರೂಪಾ ಅವರದ್ದು ಎನ್ನಲಾದ 37 ಸೆಕೆಂಡ್ ‘ಗಳ ಆಡಿಯೋದಲ್ಲಿ ರೋಹಿಣಿ ಸಿಂಧೂರಿಯವರ ಬಗ್ಗೆ ರಂಡಿ ರೋಹಿಣಿ ಎಂಬ ಅಸಹ್ಯ ಪದ ಬಳಕೆ ಮಾಡಿ ಕಿಡಿ ಕಾರಿದ್ದಾರೆ. ಮೇಲ್ನೋಟಕ್ಕೆ ಇದೊಂದು ಫೋನ್ ಕರೆ ಎನ್ನಲಾಗಿದ್ದು, ಇದರಲ್ಲಿ ಅವಾಚ್ಯ ಪದಗಳನ್ನು ಬಳಸಲಾಗಿದೆ.
ಡಿ ರೂಪಾ ಅವರು ಆರ್ ಟಿಐ ಕಾರ್ಯಕರ್ತ ಗಂಗರಾಜು ಅವರೊಂದಿಗೆ ಮಾತನಾಡುವ ಫೋನ್ ಕಾಲ್ ಸಂಭಾಷಣೆ ಎಂದು ಹೇಳಲಾಗುತ್ತಿದೆ. ಈ ಆಡಿಯೋದಲ್ಲಿ ಕೆಟ್ಟ ಪದಬಳಕೆ ಮತ್ತು ಗಂಗರಾಜು ಬಳಿ ರೆಕಾರ್ಡ್ ಮಾಡಿಕೊಂಡು ಎಲ್ಲಿಬೇಕಾದರೂ ಹಾಕಿಕೊಳ್ಳಿ ಎಂದು ಹೇಳಿದ್ದಾರೆ.
ಗಂಗರಾಜು ಜೊತೆಗೆ ಡಿ ರೂಪಾ ಅವರದ್ದು ಎನ್ನಲಾದ ಫೋನ್ ಸಂಭಾಷಣೆಯಲ್ಲಿ, “ಆ ಸಿಂಧೂರಿ ಎಷ್ಟು ಮನೆ ಕೆಡಿಸಿದ್ದಾಳೆ ಅನ್ನೋದು ಎಲ್ಲರಿಗೂ ತಿಳಿಯಲಿ. ಗಂಡನ ರಿಯಲ್ ಎಸ್ಟೇಟ್ ಬುಸಿನೆಸ್ ಪ್ರಮೋಟ್ ಮಾಡಲು ಮಾಹಿತಿ ಬಳಸಿಕೊಂಡಿದ್ದಾಳೆ. ಲ್ಯಾಂಡ್ ರಿಲೇಟೆಡ್ ಆಫೀಸ್, ಕಮಿಷನರ್ ನಿಂದ ಮಾಹಿತಿ ತಗೊಂಡಿದ್ದಾಳೆ” ಎಂದು ಹೇಳುವ ಆಡಿಯೋ ಇದೀಗ ವೈರಲ್ ಆಗಿದೆ.














