ಮನೆ ಆರೋಗ್ಯ ಮಗುವಿನ ಬೆಳವಣಿಗೆಯ ದೋಷಗಳನ್ನು ಗುರುತಿಸುವ ವಯಸ್ಸು

ಮಗುವಿನ ಬೆಳವಣಿಗೆಯ ದೋಷಗಳನ್ನು ಗುರುತಿಸುವ ವಯಸ್ಸು

0

ಮಗು ಹುಟ್ಟಿದ ಆರು ವಾರಗಳೊಳಗೆ ಡೆವಲಪ್ ಮೆಂಟ್ ಡಿಫೆಕ್ಟ್ ಯಾವುದಾದರು ಇದ್ದರೆ ಗಮನಿಸಬೇಕು. ಒಂದು ವೇಳೆ ಯಾವುದಾದರು ಇದ್ದರೆ ಮತ್ತೆ ಮೂರನೇ ತಿಂಗಳು ತುಂಬಿದಾಗ ಅವು ಇನ್ನೂ ಉಳಿದಿವೆಯೇ, ಕಡಿಮೆಯಾಗಗಗಿವೆಯೇ ಪರೀಸೀಲಿಸಬೇಕು. ಮೂರು ತಿಂಗಳವರೆಗೆ ಯಾವುದೇ ದೋಷಗಳು ಕಂಡು ಬರದಿದ್ದರೂ ಕೂಡ ಅನಂತರ ಆರು ತಿಂಗಳಿಗೊಮ್ಮೆ ಕ್ರಮವಾಗಿ 5 ವರ್ಷಗಳವರೆಗೆ ಗಮನಿಸುತ್ತಿರಬೇಕು. ಮಗುವಿನಲ್ಲಿ ಕಂಡುಬರುವ ದೋಷಗಳಿಗನುಗುಣವಾಗಿ ಆಯಾ ತಜ್ಞರಿಗೆ ತೋರಿಸಿ ಚಿಕಿತ್ಸೆ ಕೊಡಿಸಬೇಕು. ಡೆವಲಪ್ಮೆಂಟ್ ಡಿಫೆಕ್ಟ್ ಇದ್ದಾಗ ಕಾದು ನೋಡುವ ವರ್ತನೆಯನ್ನು ಬದಿಗಿಟ್ಟು ತಕ್ಷಣ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಬೇಕು.

ಚಿಕ್ಕಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸುವ ಡೆವಲಪ್ ಮೆಂಟ್ ಡಿಫೆಕ್ಟ್ :-

1.ಮೆಂಟಲ್ ರಿಟಾರ್ಡೇಷನ್ (ಬುದ್ಧಿಮಾಂದ್ಯತೆ)

2. ಸೆರಿಬ್ರಲ್ ಪಾಲ್ಸಿ

3. ಡೌನ್ಸ್ ಸಿಂಡ್ರೋಮ್

4. ಹೈಪೋಥೈರಾಯಿಡಿಸಂ

5. ಹೈಪರ್ ಆಕ್ಟಿವಿಟಿ ಡಿಸಾರ್ಡರ್ಸ್

6. ಆಟಿಸಂ            

1.ಮೆಂಟಲ್ ರಿಟಾರ್ಡೇಷನ್ (ಬುದ್ಧಿಮಾಂದ್ಯತೆ) :-    

ಈ ಸಮಸ್ಯೆ ಇರುವವರ ತಿಳುವಳಿಕೆ ಮಟ್ಟ ಕಡಿಮೆಯಿರುತ್ತದೆ. ಐ.ಕ್ಯೂ. 70ಕ್ಕಿಂತಲೂ ಕಡಿಮೆಯಿರುತ್ತದೆ. ಇವರು ವಿಷಯವೊಂದನ್ನು ಸ್ಪಷ್ಟವಾಗಿ ವಿವರಿಸಲಾರರು. ವೈಯಕ್ತಿಕ ಎಚ್ಚರ ಅಷ್ಟಾಗಿರುವುದಿಲ್ಲ. ಸಾಮಾಜಿಕ ಸಂಬಂಧಗಳನ್ನು ಹೊಂದಲಾರರು. ಕಲಿಕೆಯಲ್ಲಿ ಹಿಂದುಳಿದಿರುತ್ತಾರೆ. ಕೆಲಸದಲ್ಲಿ ನೈಪುಣ್ಯತೆವಿರುವುದಿಲ್ಲ. ಆರೋಗ್ಯದ ಬಗ್ಗೆ ತಿಳುವಳಿಕೆಯಿರುವುದಿಲ್ಲ. ಈ ಮೇಲಿನವುಗಳಲ್ಲಿ ಎರಡರಲ್ಲಿ ಸಮಸ್ಯೆಯಿದ್ದರೂ ಕೂಡ ಅವರು ಬುದ್ಧಿಮಾಂದ್ಯರ ಗುಂಪಿಗೆ ಸೇರುತ್ತಾರೆ.              

ಬುದ್ಧಿಮಾಂದ್ಯತೆಯ ಐ.ಕ್ಯೂ. :-

ಬುದ್ಧಿಮಾಂದ್ಯತೆಯನ್ನು (ಎಂ.ಆರ್) ಐ.ಕ್ಯೂ. ಆಧರಿಸಿ ನಾಲ್ಕು ವಿಭಾಗಗಳಾಗಿ ವಿಂಗಡಿಸುತ್ತಾರೆ.

ಐ.ಕ್ಯೂ. 55 ರಿಂದ 70ರ ಮಧ್ಯದಲ್ಲಿದ್ದರೆ ಮೈಲ್ಡ್ ಮೆಂಟಲ್ ರಿಟಾರ್ಡೇಷನ್(ಎಂ.ಆರ್) ಎಂದು ಪರಿಗಣಿಸುತ್ತಾರೆ.     

ಐ.ಕ್ಯೂ. 35 ರಿಂದ 55 ರ ಮಧ್ಯದಲ್ಲಿದ್ದರೆ ಮಾಡರೇಟ್ ಎಮ್.ಆರ್ ಎಂದು ಪರಿಗಣಿಸುತ್ತಾರೆ.       

ಐ.ಕ್ಯೂ. 25 ರಿಂದ 35ರ ಮಧ್ಯದಲ್ಲಿದ್ದರೆ ಸಿವಿಯರ್ ಎಮ್.ಆರ್. ಎಂದು ಪರಿಗಣಿಸುತ್ತಾರೆ.            

ಐ.ಕ್ಯೂ. 20 ರ ಒಳಗಿದ್ದರೆ ತೀವ್ರವಾದ ಎಂ.ಆರ್. ಎಂದು ಪರಿಗಣಿಸುತ್ತಾರೆ.

ಮೆಂಟಲ್ ರಿಟಾರ್ಡೇಷನ್ ಇರುವ ಶೇ.85ರಷ್ಟು ಸಂದರ್ಭಗಳಲ್ಲಿ ಮೈಲ್ಡ್ ಎಮ್.ಆರ್ ಗುಂಪಿಗೆ ಸೇರಿದವರಾಗಿರುತ್ತಾರೆ. ಇವರು 6-7ನೇ ತರಗತಿಗಳವರೆಗೆ ಸುಮಾರು ಎಲ್ಲಾ ಮಕ್ಕಳಂತೆ ಇರುತ್ತಾರೆ. ಆನಂತರ ಇವರ ತಿಳವಳಿಕೆ ಇತರ ಸಹಪಾಠಿಗಳಿಗಿಂತ ಕಡಿಮೆ ಇರುತ್ತದೆ. ಕಲಿಯುವಿಕೆಯಲ್ಲಿ ಇವರ ಸಾಮರ್ಥ್ಯ ಅಷ್ಟಕ್ಕಷ್ಟೇ. ಕೌನ್ಸಿಲಿಂಗ್ ಮತ್ತು ಮಾರ್ಗದರ್ಶನದ ಮೂಲಕ ಬಹುಮಟ್ಟಿಗೆ ಸುಧಾರಿಸುತ್ತಾರೆ. ಮಾಡರೇಟ್ ಎಂ.ಆರ್. ಇರುವವರು 1. ರಷ್ಟಿರುತ್ತದೆ. ತೀವ್ರವಾದ ಎಂ.ಆರ್. ಇರುವವರು 4 ರಷ್ಟಿರುತ್ತಾರೆ.

ಬುದ್ಧಿಮಾಂದ್ಯತೆ ಕೂಡ ವಂಶಪಾರಂರ್ಯವಾಗಿ ಬರುವ ಸಂಭವವಿದೆ. 5%ರಷ್ಟು ಬುದ್ಧಿಮಾಂದ್ಯ ಪ್ರಕರಣಗಳು ವಂಶಪಾರಂಪರ್ಯದಿಂದ ಬಂದವುಗಳಾಗಿರುತ್ತದೆ. ವಂಶಪಾರಂಪರ್ಯದಿಂದಲೇ ಅಲ್ಲದೇ ಜನ್ಮದೋಷ, ಕ್ರೋಮೋಸೋಮ್ ಗಳ ದೋಷದಿಂದ ಕೂಡ ಬುದ್ದಿಮಾಂದ್ಯತೆ ಸಂಭವಿಸುತ್ತದೆ.

ಹೆರಿಗೆ ಸಂಬಂಧಿ ಪರಿಸ್ಥಿತಿಗಳು 10ರಷ್ಟು ಮಂದಿಯಲ್ಲಿ ಬುದ್ಧಿಮಾಂದ್ಯತೆಯನ್ನು ಉಂಟುಮಾಡುತ್ತದೆ. ಅವಧಿಗೆ ಮುಂಚೆ ಹುಟ್ಟುವುದು, ಕಡಿಮೆ ತೂಕದೊಂದಿಗೆ ಹುಟ್ಟುವುದು, ತಲೆಗೆ ಪೆಟ್ಟಾಗುವುದು, ಚಿಕ್ಕಂದಿನಿಂದಲೆ ಬರುವ ಮೆದುಳಿನ ರೋಗಗಳು ಬುದ್ಧಿಮಾಂದ್ಯತೆಯನ್ನುಂಟುಮಾಡುತ್ತದೆ. ಬುದ್ಧಿಮಾಂದ್ಯತೆಯಿರುವ ಮಕ್ಕಳ 15-20 ಪ್ರಕರಣಗಳು ಚಿಕ್ಕಂದಿನಲ್ಲಿ ಸೋಂಕು ತಗುಲಿ ಬಂದವುಗಳಾಗಿರುತ್ತದೆ.

ಬುದ್ಧಿಮಾಂದ್ಯತೆಯನ್ನು ಗುರುತಿಸುವುದು :-

ಐ.ಕ್ಯೂ. ಪರೀಕ್ಷೆ ಮೂಲಕ ಬುದ್ಧಿಮಾಂದ್ಯತೆ ಯಾವ ಸ್ಥಾನದಲ್ಲಿದೆಯೆಂಬುದನ್ನು ಗುರುತಿಸಬಹುದು. ಬುದ್ಧಿಮಾಂದ್ಯತೆ ಔಷಧಿಗಳಿಂದ ವಾಸಿಯಾಗುವುದಿಲ್ಲ. ಬುದ್ಧಿಮಾಂದ್ಯತೆ ಇರುವುದನ್ನು ಆರಂಭದಲ್ಲಿ ಗುರುತಿಸಿದರೆ ಸೂಕ್ತ ಕೌನ್ಸಿಲಿಂಗ್ ಮತ್ತು ಮಾರ್ಗದರ್ಶನದ ಮೂಲಕ ಅವರ ನಿಪುಣತೆಯನ್ನ ತಿದ್ದಬಹುದು. ಪೋಷಕರ ಕೌನ್ಸಿಲಿಂಗ್ ಮತ್ತು ಬಿಹೇವಿಯರ್ ಮ್ಯಾನೇಜ್ಮೆಂಟ್ ಮೂಲಕ ಅವರ ಸಾಮರ್ಥ್ಯವನ್ನು ಹೆಚ್ಚಿಸಬಹುದು.

ಹೈಪೋಥೈರಾಯಿಡಿಸಂ ಮೂಲಕ ಬುದ್ಧಿಮಾಂದ್ಯತೆ ಬಂದಿದ್ದಾಗ ಥೈರಾಯ್ಡ್ ಔಷಧಿಗಳ ಮೂಲಕ ಚಿಕಿತ್ಸೆ ಮಾಡಬಹುದು. ಹೈಪೋ ಥೈರಾಯಿಡಿಸಂ ಸರಿಪಡಿಸಿದರೆ ಬುದ್ಧಿಮಾಂದ್ಯತೆ ಸುಧಾರಿಸುತ್ತದೆ.

ಬುದ್ಧಿಮಾಂದ್ಯತೆ ಇರುವ ಕೆಲವು ಮಕ್ಕಳಿಗೆ ಫಿಟ್ಸ್ ಕೂಡ ಬರುತ್ತದೆ. ಇವರಿಗೆ ಸೂಕ್ತ ಔಷಧಿಗಳನ್ನು ಬಳಸಬೇಕು.

ಕೆಲವು ಮಕ್ಕಳಲ್ಲಿ ಚಟುವಟಿಕೆಯಿರುತ್ತದೆ. ಅದು ತಿಳುವಳಿಕೆಯಿಂದ ಕೂಡಿದ ಚಟುವಟಿಕೆಯಲ್ಲ. ಎಲ್ಲಾದರಲ್ಲಿಯೂ ವಿಪರೀತ ವೇಗ. ಅತಿಯಾಗಿ ಅರಚುವುದು, ಕುಣಿದು ಕುಪ್ಪಳಿಸುವುದು, ಕಂಡದ್ದನ್ನೆಲ್ಲಾ ಮುರಿಯುವುದು, ಕೀಳುವುದು, ಇಂತಹ ಮಕ್ಕಳನ್ನು ಹೈಪರ್ ಆಕ್ಟಿವ್ ಚಿಲ್ಡ್ರನ್ ಎನ್ನುತ್ತಾರೆ. ಹೈಪರ್ ಆಕ್ಟಿವಿಟಿ ಎಂ.ಆರ್ ಮಕ್ಕಳಲ್ಲಿರುತ್ತದೆ. ಇಂತಹ ಮಕ್ಕಳಿಗೆ ಹಾಲೋಪೆರಿಡಾಲ್, ಯಫಿಟಮೈನ್ ಔಷಧಿಗಳನ್ನು ಬಳಸಬೇಕು.

-ಮುಂದುವರೆಯುತ್ತದೆ….