ಮನೆ ಕಾನೂನು ಕಾರ್ಯಾಂಗ ತನ್ನ ಎಲ್ಲೆ ಮೀರಿದ್ದಕ್ಕೆ ‘ಬುಲ್ಡೋಜರ್ ನ್ಯಾಯʼ ಉದಾಹರಣೆ: ನ್ಯಾ. ಬಿ ವಿ ನಾಗರತ್ನ

ಕಾರ್ಯಾಂಗ ತನ್ನ ಎಲ್ಲೆ ಮೀರಿದ್ದಕ್ಕೆ ‘ಬುಲ್ಡೋಜರ್ ನ್ಯಾಯʼ ಉದಾಹರಣೆ: ನ್ಯಾ. ಬಿ ವಿ ನಾಗರತ್ನ

0

ಅಪರಾಧ ಪ್ರಕ್ರಿಯೆಯಲ್ಲಿ ಆರೋಪಿಗಳಾಗಿರುವವರನ್ನು ಶಿಕ್ಷಿಸಲು ವಿಚಾರಣೆ ನಡೆಸದೆ ಅವರ ಮನೆ ಅಥವಾ ಅಂಗಡಿಗಳನ್ನು ನೆಲಸಮ ಮಾಡಿ, ಬುಲ್ಡೋಜರ್ ಮೂಲಕ ನ್ಯಾಯ ಒದಗಿಸುವ ಅಧಿಕಾರಿಗಳ ಕ್ರಮವನ್ನು ಈಚೆಗೆ ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ್ದು ಅದನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ ವಿ ನಾಗರತ್ನ ಶ್ಲಾಘಿಸಿದರು.

Join Our Whatsapp Group

ಚೆನ್ನೈನಲ್ಲಿ ಭಾನುವಾರ ಆಯೋಜಿಸಲಾಗಿದ್ದ ನ್ಯಾಯಮೂರ್ತಿ ಎಸ್ ನಟರಾಜನ್ ನೆನಪಿನ ಶತಮಾನೋತ್ಸವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನ್ಯಾಯಾಂಗ ತೀರ್ಪು ನೀಡುವ ಮುನ್ನವೇ ಈಚಿನ ವರ್ಷಗಳಲ್ಲಿ ಆರೋಪಿಗಳ ಆಸ್ತಿ ಧ್ವಂಸಗೊಳಿಸಿರುವುದು ಕಾರ್ಯಾಂಗದ ಅತಿಕ್ರಮಣಕ್ಕೆ ಸ್ಪಷ್ಟ ಉದಾಹರಣೆ ಎಂದು ಅವರು ಹೇಳಿದರು.

ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಎನಿಸಿಕೊಳ್ಳಲಿರುವ ನ್ಯಾ. ನಾಗರತ್ನ, ಪ್ರಜಾಪ್ರಭುತ್ವ ಎಂಬುದು ವೈವಿಧ್ಯಮಯ ಅಭಿಪ್ರಾಯಗಳಿಗೆ ಸಾಕ್ಷಿಯಾಗಬೇಕೆ ವಿನಾ ಏಕೈಕ ಜನಪ್ರಿಯ ಅಭಿಪ್ರಾಯಕ್ಕಲ್ಲ ಎಂದರು.

ಈಚಿನ ವರ್ಷಗಳಲ್ಲಿ ಕಾರ್ಯಾಂಗ ತನ್ನ ಎಲ್ಲೆ ಮೀರಿದ್ದಕ್ಕೆ ʼಬುಲ್ಡೋಜರ್‌ ನ್ಯಾಯʼ ಉದಾಹರಣೆಯಾಗಿದೆ. ನಿವೃತ್ತ ನ್ಯಾಯಮೂರ್ತಿಗಳಿಗೆ ಪುನರ್ವಸತಿ ಕಲ್ಪಿಸಲು ನ್ಯಾಯಮಂಡಳಿಗಳು ಉತ್ತಮ ಅವಕಾಶವೆನಿಸಿದರೂ ಇದೇ ವೇಳೆ ಇಂತಹ ಮಂಡಗಳಿಗಳಲ್ಲಿರುವ ತಾಂತ್ರಿಕ ಅಥವಾ ಇನ್ನಿತರ ಸದಸ್ಯರು ಯಾರು ಎನ್ನುವ ಪ್ರಶ್ನೆ ಏಳುತ್ತದೆ.

ಹೈಕೋರ್ಟ್‌ಗಳ ಮೇಲಿನ ಒತ್ತಡ ತಗ್ಗಿಸಲು ನ್ಯಾಯಮಂಡಳಿಗಳನ್ನು ರಚಿಸುವ ಪರಿಪಾಠ ರೂಢಿಗೆ ಬಂತು. ಮೊದಲು ಸೇವಾ ನ್ಯಾಯಮಂಡಳಿಗಳು, ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗಳು ಇದ್ದವು. ಆದರೆ ನ್ಯಾಯಮಂಡಳಿಗಳ ರಚನೆಯ ಪ್ರಯೋಗ ಕೆಲ ರಾಜ್ಯಗಳಲ್ಲಿ ವೈಫಲ್ಯ ಕಂಡಿದ್ದು ಪ್ರಕರಣಗಳು ಮತ್ತೆ ಉನ್ನತ ನ್ಯಾಯಾಲಯಗಳ ಕದ ತಟ್ಟಿವೆ.

ಭಾರತದ ರಾಷ್ಟ್ರಪತಿ ಅಥವಾ ರಾಜ್ಯಗಳ ರಾಜ್ಯಪಾಲರಿಗೆ ಸಂಪೂರ್ಣ ವಿವೇಚನಾಧಿಕಾರ ಬಳಸಬಲ್ಲ ವಿಷಯಗಳಲ್ಲಿ ಅಧಿಕಾರದ ತೃಪ್ತಿ ಎಂಬುದು ವೈಯಕ್ತಿಕ ತೃಪ್ತಿ ಎಂದರ್ಥವಲ್ಲ. ರಾಷ್ಟ್ರಪತಿ ಮತ್ತು ರಾಜ್ಯಪಾಲರ ಕಾನೂನು ರಚನೆಯ ಅಧಿಕಾರದಲ್ಲಿ ಅಧಿಕಾರ ಪ್ರತ್ಯೇಕತೆಗೆ ಆದ್ಯತೆ ದೊರೆಯಬೇಕು ಎಂದರು.