ಮನೆ ರಾಷ್ಟ್ರೀಯ ʻಅಗ್ನಿಪಥ್‌ʼ ಯೋಜನೆಯ ವಯೋಮಿತಿ 23 ವರ್ಷಕ್ಕೆ ಏರಿಕೆ

ʻಅಗ್ನಿಪಥ್‌ʼ ಯೋಜನೆಯ ವಯೋಮಿತಿ 23 ವರ್ಷಕ್ಕೆ ಏರಿಕೆ

0

ನವದೆಹಲಿ (New Delhi): ಸೇನಾ ನೇಮಕಾತಿ ʻಅಗ್ನಿಪಥ್‌ʼ ಯೋಜನೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಡುವೆ 2022ನೇ ಸಾಲಿನ ಅಗ್ನಿಪಥ ಯೋಜನೆಯಡಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಕೇಂದ್ರ ಸರ್ಕಾರ 21 ವರ್ಷದಿಂದ 23 ವರ್ಷಕ್ಕೆ ಹೆಚ್ಚಿಸಿದೆ.

ಕಳೆದ ಮಂಗಳವಾರ ಯೋಜನೆಯನ್ನು ಅನಾವರಣಗೊಳಿಸಿದ್ದ ಕೇಂದ್ರ ಸರ್ಕಾರ, ಎಲ್ಲಾ ಹೊಸ ನೇಮಕಾತಿಗಳಿಗೆ ಪ್ರವೇಶ ವಯಸ್ಸು 17ರಿಂದ  21 ವರ್ಷದೊಳಗೆ ಇರಬೇಕು ಎಂದು ಹೇಳಿತ್ತು. ಇನ್ನು ಕಳೆದ ಎರಡು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಗಳು ನಡೆಯದೆ ಇದ್ದಿದ್ದರಿಂದ ಬಿಹಾರ, ಹರಿಯಾಣ ಸೇರಿದಂತೆ ದೇಶದ ಕೆಲ ರಾಜ್ಯಗಳಲ್ಲಿ ಯುವಕರು ಬೀದಿಗಿಳಿದು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. ಇದೆಲ್ಲವನ್ನು ಮನಗಂಡಿರುವ ಕೇಂದ್ರ ಸರ್ಕಾರ, 2022ರ ಪ್ರಸ್ತಾವಿತ ನೇಮಕಾತಿಗೆ ಒಂದು ಬಾರಿ ವಿನಾಯಿತಿ ನೀಡಲು ನಿರ್ಧರಿಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

2022 ರ ಅಗ್ನಿಪಥ್ ಯೋಜನೆಯಡಿ ನೇಮಕಾತಿ ಪ್ರಕ್ರಿಯೆಗೆ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ದೇಶದ ಕೆಲ ರಾಜ್ಯಗಳಲ್ಲಿ ‘ಅಗ್ನಿಪಥ’ ಯೋಜನೆ ವಿರುದ್ದ ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಉದ್ರಿಕ್ತ ಯುವಕರು ಕೆಲ ರೈಲುಗಳಿಗೆ ಬೆಂಕಿ ಹಚ್ಚಿದ್ದು ಸಾರ್ವಜನಿಕರು ಮತ್ತು ಪೊಲೀಸ್ ವಾಹನಗಳ ಮೇಲೆ ದಾಳಿ ನಡೆಸಿದ್ದರು. ಇದರಿಂದ ಕೆಲ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.

ಹಿಂದಿನ ಲೇಖನಇಂದಿನ ಹವಾಮಾನ ವರದಿ
ಮುಂದಿನ ಲೇಖನರಾಹುಲ್‌ ಗಾಂಧಿ ವಿಚಾರಣೆ ಮುಂದಿನ ವಾರಕ್ಕೆ ಮುಂದೂಡಿದ ಇಡಿ